

ಮಾಸ್ಕೋ: ಹತ್ತು ವರ್ಷದ ಬಾಯ್ಫ್ರೆಂಡ್ನಿಂದ ನಾನು ಗರ್ಭಿಣಿಯಾದನೆಂದು ಹೇಳಿದ ಬಳಿಕ ನನ್ನ ಮೇಲೆ ಈ ಹಿಂದೆಯೇ 16 ವರ್ಷದ ಹುಡಗನಿಂದ ಅತ್ಯಾಚಾರ ನಡೆಯಿತು ಎಂದು ಆರೋಪಿಸಿರುವ 13 ವರ್ಷದ ಬಾಲಕಿಯ ಹೆಣ್ಣು ಮಗುವಿನ ತಂದೆ ಯಾರೆಂಬುದು ಡಿಎನ್ಎ ಪರೀಕ್ಷೆಯಲ್ಲಿ ಕೊನೆಗೂ ಬಯಲಾಗಿದೆ.
ಬಾಲಕಿಯ ಹೆಸರು ದರ್ಯಾ ಸುಡ್ನಿಶ್ನಿಕೋವಾ (ಪ್ರಸ್ತುತ 14 ವರ್ಷ). ತನ್ನ ಹತ್ತು ವರ್ಷದ ಬಾಯ್ಫ್ರೆಂಡ್ ಇವಾನ್ (ಪ್ರಸ್ತುತ 11 ವರ್ಷ) ನಿಂದ ಗರ್ಭಿಣಿಯಾಗಿದ್ದೇನೆಂದು ಮಾಧ್ಯಮವೊಂದರ ಮುಂದೆ ಬಹಿರಂಗಪಡಿಸಿದ ಬೆನ್ನಲ್ಲೇ ದರ್ಯಾ ರಷ್ಯಾದಲ್ಲಿ ಪ್ರಖ್ಯಾತಿ ಗಳಿಸಿದ್ದಾಳೆ.
ದರ್ಯಾ ಆಗಸ್ಟ್ 16ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಬಾಲಕ ಇವಾನ್ ತಂದೆಯೆಂದು ಆಕೆ ಹೇಳಿಕೊಂಡಿದ್ದಾಳೆ. ಹೆರಿಗೆ ಚಿಕಿತ್ಸೆ ಮುಗಿದು ಚೇತರಿಸಿಕೊಂಡಿದ್ದರಿಂದ ದರ್ಯಾ ಇದೀಗ ಕ್ರಾಸ್ನೋಯಾರ್ಸ್ಕ್ನಲ್ಲಿರುವ ಕ್ಲೀನಿಕ್ನಿಂದ ತನ್ನ ತವರು ಹೆಲೆಜ್ನೋಗೊರ್ಸ್ಕ್ನಲ್ಲಿರುವ ಮನೆಗೆ ಮರಳಿದ್ದಾರೆ. ಆಸ್ಪತ್ರೆಯಿಂದ ಹೊರಡುವಾಗ ಬಾಗಿಲ ಬಳಿ ದರ್ಯಾ ಮತ್ತು ಇವಾನ್ ತಮ್ಮ ತಾಯಂದಿರ ಜತೆ ನಿಂತು ನಗು ಮುಖದಿಂದಲೇ ಕ್ಯಾಮೆರಾಗೆ ಪೋಸ್ ನೀಡಿದ್ದು, ಫೋಟೋ ವೈರಲ್ ಆಗಿದೆ.
ಇನ್ನು ದರ್ಯಾ 16 ವರ್ಷದ ಬಾಲಕ ಎಸಗಿದ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದಾಳೆಂದು ನಂಬಲಾಗಿತ್ತು. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸ್ವತಃ ದರ್ಯಾ ಸಹ ಒಪ್ಪಿಕೊಂಡಿದ್ದಳು. ಇದಕ್ಕೂ ಮುಂಚೆ ಇದರ ಮುಜುಗರದಿಂದ ತಪ್ಪಿಸಿಕೊಳ್ಳಲು 10 ವರ್ಷ ಬಾಯ್ಫ್ರೆಂಡ್ ತನ್ನ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಳು. ಅಚ್ಚರಿಯ ಸಂಗತಿಯೆಂದರೆ ಪೊಲೀಸರು ಮಗು ಎಮಿಲಿಯಾ ಡಿಎನ್ಎ ಪರೀಕ್ಷೆ ಮಾಡಿಸಿದ್ದು, ಮಗುವಿನ ತಂದೆ 10 ವರ್ಷದ ಇವಾನ್ ಎಂದು ಖಚಿತವಾಗಿಲ್ಲ. ಬದಲಾಗಿ ಹದಿಹರೆಯದ (13 ರಿಂದ 19) ಹುಡುಗನೆಂಬುದು ಖಚಿತವಾಗಿದೆ.
ಇವಾನ್ ದರ್ಯಾಳನ್ನು ಗರ್ಭಿಣಿಯಾಗಿಸುವುದು ಜೈವಿಕವಾಗಿ ಅಸಾಧ್ಯವೆಂದು ಈ ಮೊದಲೇ ವೈದ್ಯರು ಮತ್ತು ತಜ್ಞರು ಹೇಳಿದ್ದರು. ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂತಲೂ ಆರೋಪಿಸಲಾಗಿತ್ತು. ಆದರೆ, ಇದೀಗ ಡಿಎನ್ಎ ವರದಿಯಿಂದ ಅಸಲಿ ಸತ್ಯ ಬಹಿರಂಗವಾಗಿದೆ. ಅತ್ಯಾಚಾರದ ಬಗ್ಗೆ ಹೇಳಿದ್ದ ದರ್ಯಾ, ಹೆಲೆಜ್ನೋಗೊರ್ಸ್ಕ್ನಲ್ಲಿರುವ ತನ್ನ ಮನೆಯ ಮೆಟ್ಟಿಲುಗಳ ಮೇಲೆ 16 ವರ್ಷದ ಹುಡುಗನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೆ. ಆತ ತನ್ನ ವಯಸ್ಸಿಗಿಂತ ತುಂಬಾ ದಪ್ಪಗೆ, ಎತ್ತರವಾಗಿದ್ದ ಎಂತಲೂ ಹೇಳಿದ್ದಾಳೆ.
ದರ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 474,000 ಹಿಂಬಾಲಕರನ್ನು ಹೊಂದಿದ್ದಾಳೆ. ಇದಕ್ಕೆ ಕಾರಣ ಆಕೆಯ ವಯೋಸಹಜವಲ್ಲದ ಗರ್ಭಾವಸ್ಥೆ. ಅಲ್ಲದೆ, 10 ವರ್ಷದ ಬಾಯ್ಫ್ರೆಂಡ್ ಇದಾನೆ ಎಂಬುದು ಆಕೆಗೆ ರಷ್ಯಾದಲ್ಲಿ ಪ್ರಖ್ಯಾತಿ ತಂದುಕೊಟ್ಟಿದೆ. ಇದೀಗ ಮಗುವಿಗೆ ಜನ್ಮ ನೀಡಿರುವುದು ಮತ್ತಷ್ಟು ಪ್ರಚಾರ ತಂದುಕೊಡಲಿದೆ.
ಇದೀಗ ಮಗುವಿನ ಪಾಲನೆಯಲ್ಲಿ ದರ್ಯಾ ತೊಡಗಿಕೊಂಡಿದ್ದು, ನಾನು ಸದ್ಯ 57 ಕೆ.ಜಿ ಇದ್ದೇನೆ. ತೂಕ ಇಳಿಸಿಕೊಳ್ಳುತ್ತಿದ್ದೇನೆ. ಹೀಗಾಗಿ ಮಿತ ಆಹಾರ ಸೇವಿಸುತ್ತಿದ್ದೇನೆ. ಮಗು ಚೆನ್ನಾಗಿದೆ. ಇಬ್ಬರು ಆರೋಗ್ಯವಾಗಿದ್ದೇವೆಂದು ಮಗುವಿನ ಜತೆ ಆಟವಾಡುತ್ತಿರುವ ವಿಡಿಯೋವನ್ನು ದರ್ಯಾ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾಳೆ.
ಇನ್ನು ರಷ್ಯಾ ಸಂಪ್ರದಾಯ ಪ್ರಕಾರ ಹೊಸದಾಗಿ ಜನಿಸಿದ ಮಗು 40 ದಿನಗಳು ಪೂರೈಸುವವರೆಗೂ ಅದರ ಮುಖವನ್ನು ತೋರಿಸುವುದಿಲ್ಲ ಎಂದು ದರ್ಯಾ ಹೇಳಿದ್ದಾಳೆ. (ಏಜೆನ್ಸೀಸ್)