ಕವನ ಓದಿ ಬಿಜೆಪಿ, ಜೆಡಿಎಸ್ ಕಾಲೆಳೆದ ಡಿಕೆಶಿ

dk shivakumar
dk shivakumar statement over bjp
Published on

ಬೆಂಗಳೂರು: ಐದನೇ ಗ್ಯಾರಂಟಿ ಯುವ ನಿಧಿ ಜಾರಿಗೆ ಮುನ್ನ ನೋಂದಣಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಈ ವೇಳೆ ವೇದಿಕೆಯಲ್ಲಿ ಸ್ವರಚಿತ ಕವನ ವಾಚಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಸಭೆಯಲ್ಲಿದ್ದವರ ಗಮನ ಸೆಳೆದರು.

‘ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು,ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು, ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಕರ್ನಾಟಕ ಸಮೃದ್ಧವಾಯಿತು, ಕರ್ನಾಟಕ ಪ್ರಬುದ್ಧವಾಯಿತು’ ಎಂದು ತಮ್ಮ ಸಾಲುಗಳನ್ನು ಓದಿದಾಗ ಸಭೆಯಲ್ಲಿದ್ದವರಲ್ಲಿ ನಗು ಉಕ್ಕಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net