ಸೂರ್ಯ ಉದಯಿಸಲು ಬಿಡಿ; ಕಾಂಗ್ರೆಸ್​ ಎರಡನೇ ಪಟ್ಟಿ ಬಿಡುಗಡೆ ಕುರಿತು ಡಿ.ಕೆ.ಶಿವಕುಮಾರ್​​ ಸುಳಿವು

DK Shivakumar
Published on

ನವದೆಹಲಿ: ರಾಜ್ಯ ವಿಧಅನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್​ ಎರಡನೇ ಪಟ್ಟಿ ನಾಳೆ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸುಳಿವು ನೀಡಿದ್ಧಾರೆ.

ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್​ ಸಿಇಸಿ ಮೀಟಿಂಗ್ ಮುಕ್ತಾಯ ಆಗಿದೆ ಅರ್ಧ ಕೆಲಸ ಆಗಿದೆ, ನಾಳೆ ಇನ್ನು ಉಳಿದ ಕೆಲಸ ಆಗಲಿದೆ ಎಂದು ಹೇಳಿದ್ದಾರೆ.

CEC Meeting

ಇನ್ನು ಗುರುವಾರ ಎರಡನೇ ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿ ಸೂರ್ಯ ಉದಯ ಆಗಲು ಬಿಡಿ ಅದಕ್ಕಾಗಿ ನೀವು ಕಾಯಬೇಕು. ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ ನಿಮಗೆ ಪಟ್ಟಿ ಬಿಡುಗಡೆಯ ನಂತರ ಗೊತ್ತಾಗಲಿದೆ ಎಂದು ಸುಳಿವು ನೀಡಿದ್ದಾರೆ.

ಇನ್ನು ಬಿಜೆಪಿಗೆ ಸ್ಟಾರ್​ಗಳ ಬೆಂಬಲ ಕುರಿತು ಪ್ರತಿಕ್ರಿಯಿಸಿ ಬಿಜೆಪಿ ಯಾತ್ರೆಗಳಿಗೆ ಜನರು ಸೇರುತ್ತಿಲ್ಲ. ಹಾಗಾಗಿ ಸ್ಟಾರ್ ನಟರ ಮೂಲಕ ಸೇರಿಸಬಹುದು. ಎಂದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಟಾಂಗ್​ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net