

ರಾಮನಗರ: ಕನಕಪುರದ ವಿಧಾನಸಭಾ ಕ್ಚೇತ್ರದ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಸಿ ಹೊಸ ಟ್ವಸ್ಟ್ ನೀಡಿದ್ದಾರೆ. ಡಿ.ಕೆ ಶಿವಕುಮಾರ್ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಂತೋಷ್ಗೆ ನಾಮಪತ್ರ ಸಲ್ಲಿಸಿದ್ದಾರೆ
ಈ ಹಿಂದೆ ಡಿಕೆ ಸುರೇಶ್ ಪದ್ಮನಾಭ ನಗರದಲ್ಲಿ ನಾಮಪತ್ರ ಸಲ್ಲಿಸುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಆರ್, ಅಶೋಕ್ಗೆ ಕೌಂಟರ್ ನೀಡುವ ಲೆಕ್ಕಾಚಾರದಲ್ಲಿ ಅಲ್ಲಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು.
ಅದಲ್ಲದೇ ಇಂದು ಡಿಕೆಶಿ ಕೂಡ 1 ಗಂಟೆವರೆಗೆ ಕಾದು ನೋಡಿ ಎಂದು ಹೇಳಿ ಮತ್ತೆ ಕುತೂಹಲ ಮೂಡಿಸಿದ್ದರು. ಸಂಸದ ಡಿಕೆ ಸುರೇಶ್ ಸ್ಪರ್ಧೆಯ ಬಗ್ಗೆ ಗುಟ್ಟು ಬಿಟ್ಟುಕೊಡದ ಗುಟ್ಟು ಇದೀಗ ಬಹಿರಂಗವಾಗಿದೆ.
ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗುತ್ತಿದ್ದು ನಿನ್ನೆ ನಡೆದ ಕೆಲ ಬೆಳವಣಿಗೆಗಳ ನಂತರ ಡಿಕೆಶಿಯಿಂದ ಸೂಚನೆ ಬಂದಿದೆ.
ಡಿಕೆ ಶಿವಕುಮಾರ್ ಸಲ್ಲಿಸಿರುವ ನಾಮಪತ್ರಕ್ಕೆ ತಕರಾರು ಬಂದಿದೆ ಎಂಬ ಮಾಹಿತಿ ಲಭಿಸಿದೆ. ಅದರಲ್ಲೂ ವಿಶೇಷವಾಗಿ ಆಸ್ತಿ ವಿವರಕ್ಕೆ ಸಂಬಂಧಿಸಿದಂತೆ ಕೆಲವರಿಂದ ತಕರಾರು ಬರುವ ಸುಳಿವು ಇದ್ದ ಹಿನ್ನೆಲೆಯಲ್ಲಿ ಆಪ್ತರು ಹಾಗು ಕಾನೂನು ಸಲಹೆಗಾರರ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ತಕರಾರಿನಿಂದ ಏನಾದರೂ ಸಮಸ್ಯೆ ಆದರೆ ಎಂಬ ಆತಂಕದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಹೋದರನಿಂದ ನಾಮಪತ್ರ ಸಲ್ಲಿಕೆ ಮಾಡಲಾಗಿದೆ ಎನ್ನಲಾಗಿದೆ.