ಡಿಕೆಶಿ ಪಟ್ಟಾಭಿಷೇಕ ಆರಂಭದ ಕ್ಷಣ ಹೇಗಿತ್ತು?

dks 1
Published on

ಬೆಂಗಳೂರು: "ಬೆಳಗುತಿದೆ ಜ್ಯೋತಿ ಕಾಂಗ್ರೆಸ್​ ಜ್ಯೋತಿ... ಬೆಳಗುತಿದೆ ಜ್ಯೋತಿ ಭರವಸೆಯ ಜ್ಯೋತಿ, ಸಮತೆಯ ಸಾರುವ ಜ್ಯೋತಿ, ಒಲವನ್ನು ತೋರುವ ಜ್ಯೋತಿ...'' ಎಂದು ಚಲನಚಿತ್ರ ನಿರ್ದೇಶಕ ಸಾಧುಕೋಕಿಲಾ ಅವರು ಹಾಡುತ್ತ ಡಿಕೆಶಿ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಕಳೆಕಟ್ಟಿದರು.

ಪ್ರದಗ್ರಹಣ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಡಿಕೆಶಿ ವ್ಯಕ್ತಿಪರಿಚಯದ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಬಳಿಕ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ಮೌನಾಚರಣೆ, ಸೇವಾದಳದಿಂದ ವಂದೇಮಾತರಂ ಗೀತಗಾಯನ ನೆರವೇರಿತು. ಇದನ್ನೂಓದಿರಿ ಇನ್ನೂ ಒಂದು ವಾರ ಮಾರುಕಟ್ಟೆಗಳು ಬಂದ್​!

ರಾಜ್ಯಾದ್ಯಂತ ಸುಮಾರು 14 ಸಾವಿರ ಸ್ಥಳಗಳಲ್ಲಿ ಪರೋಕ್ಷವಾಗಿ ಪದಗ್ರಹಣ ಕಾರ್ಯಕ್ರಮದ ಕಳೆಗಟ್ಟಿತ್ತು. ಏಕ ಕಾಲದಲ್ಲಿ ಸಂವಿಧಾನದ ಪೀಠಿಕೆ ಮತ್ತು ಪಕ್ಷ ಕಟ್ಟುವ ಪ್ರತಿಜ್ಞೆಯನ್ನು ಸ್ವೀಕಾರ ಮಾಡಲಾಯಿತು. ಮುಂಚೂಣಿ ಘಟಕಗಳ ಹಾಲಿ ಮಾಜಿ ಅಧ್ಯಕ್ಷರಿಂದ ಜ್ಯೋತಿ ಬೆಳಗಲಾಯಿತು.

ನಿಕಟಪೂರ್ವ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರು ಡಿಕೆಶಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಡಿಕೆಶಿಗೆ ಕಳುಹಿಸಿರುವ ಸಂದೇಶವನ್ನು ರಾಜ್ಯ ಉಸ್ತವಾರಿ ಕೆ.ಸಿ. ವೇಣುಗೋಪಾಲ್​ ವಾಚಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್​ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವು ಸಂಪೂರ್ಣ ಡಿಜಿಟಲ್​ ಮಯವಾಗಿತ್ತು. ರಾಜ್ಯದಾದ್ಯಂತ 7,800 ಸ್ಥಳಗಳಲ್ಲಿ ಎಲ್​ಇಡಿ ಪರದೆ ಮೂಲಕ ನೇರ ಪ್ರಸಾರ ಮಾಡಲಾಗಿದ್ದು, ಝೂಮ್​ ಕಾನ್ಫರೆನ್ಸ್​, ಫೇಸ್​ಬುಕ್​ ಲೈವ್​ನಲ್ಲಿ ಡಿಕೆಶಿ ಪಟ್ಟಾಭಿಷೇಕವನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು.

ಡಿ.ಕೆ ಶಿವಕುಮಾರ್ ಅವರು ಪದಗ್ರಹಣ ಕಾರ್ಯಕ್ರಮಕ್ಕೂ ಮುನ್ನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net