

ಬೆಂಗಳೂರು: ಇದೀಗ ರಾಜ್ಯದಲ್ಲಿ ವಿದ್ಯುತ್ತಿನ ಫಿಕ್ಸೆಡ್ ದರವನ್ನು ಮೇ ತಿಂಗಳಿಂದ ಅನ್ವಯವಾಗುವಂತೆ ಹೆಚ್ಚಿಸಲಾಗಿದ್ದು ಅದರ ಮೇಲೆಯೇ ಇನ್ನೊಂದು ಬರೆ ಎನ್ನುವ ಹಾಗೆ ರಾಜಧಾನಿಯಲ್ಲಿ ನೀರಿನ ಬಿಲ್ ಕೂಡ ಹೆಚ್ಚಾಗಲಿದೆ
ರಾಜಧಾನಿಯಲ್ಲಿ ಸದ್ಯದಲ್ಲೇ ನೀರು ಬಳಕೆ ಶುಲ್ಕ ಹೆಚ್ಚಾಗಲಿದ್ದು ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದ್ದು ರಾಜಧಾನಿಯಲ್ಲಿ 10 ವರ್ಷ ಬಳಿಕ ದರ ಹೆಚ್ಚಳ ಕುರಿತು ಸುಳಿವು ನೀಡಿದ್ದಾರೆ.
ಬೆಂಗಳೂರು ಜಲಮಂಡಳಿ ಸ್ಥಿತಿ ಚಿಂತಾಜನಕವಾಗಿದೆ ಎಂದಿರುವ ಡಿಸಿಎಂ ಡಿಕೆ ಶಿವಕುಮಾರ್, “2014 ರಿಂದ ಈವರೆಗೆ ನೀರು ಬಳಕೆ ಶುಲ್ಕ ಹೆಚ್ಚಳ ಮಾಡಿಲ್ಲ. ಜಲಮಂಡಳಿಯ ಆದಾಯ ತೀರಾ ಕಡಿಮೆಯಾಗಿದ್ದು , ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿನ್ನಲೆ ನೀರಿನ ಶುಲ್ಕ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ” ಎಂದು ಹೇಳಿದ್ದಾರೆ.