ಈ ಕುರಿತು ಮುಖ್ಯಮಂತ್ರಿ ಅಧಿಕೃತ ಖಾತೆ ಎಕ್ಸ್ನಲ್ಲಿ ಮಾಹಿತಿ ನೀಡಿದ ಅವರು, "ಮನೆ ಮಗನಂತೆ ಹರಸಿ, ಹಾರೈಸಿ ರಾಜಕೀಯ ಕ್ಷೇತ್ರದಲ್ಲಿ ಈ ಹಂತದ ವರೆಗೆ ನನ್ನನ್ನು ಬೆಳೆಸಿದ ಜನತಾ ಜನಾರ್ಧನರಿಗೆ ಕಾಯಾ ವಾಚಾ ಮನಸಾ ನನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಜನರ ಸೇವೆ ಮಾಡುತ್ತೇನೆ," ಎಂದು ವಿನಯಪೂರ್ವಕವಾಗಿ ವಾಗ್ದಾನ ಮಾಡಿದ್ದಾರೆ. ಅಲ್ಲದೆ, ಹೊಸ ಸರ್ಕಾರ ಮತ್ತು ಹೊಸ ಸಾರಥಿಯಾಗಿ ತಮ್ಮ ಮೇಲೆ ಜನ ಇಟ್ಟಿರುವ ಅಪಾರ ನಿರೀಕ್ಷೆಗಳ ಅರಿವು ತಮಗಿದೆ ಎಂದು ಅವರು ತಿಳಿಸಿದ್ದಾರೆ.