ಅಂಬೇಡ್ಕರ್​ ಪುತ್ತಳಿಗೆ ಬಸ್​ನಿಂದಲೇ ಹಾರ ಎಸೆದ ಡಿಕೆಶಿ!

dks
Published on

ಚಿತ್ರದುರ್ಗ: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಮುಖ್ಯ ರಸ್ತೆಯಲ್ಲಿ ಡಿ.ಕೆ ಶಿವಕುಮಾರ್​ ಯಾತ್ರೆ ಮಾಡುತ್ತಾ ಬರುವಾಗ ಈ ಘಟನೆ ನಡೆದಿದೆ.

2 ದಿನದ ಹಿಂದೆ ನಡೆದ ಪ್ರಜಾಧ್ವನಿ ಯಾತ್ರೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಂಘಟಕರು ಅಂಬೇಡ್ಕರ್ ಪುತ್ತಳಿಗೆ ಹಾರ ನೀಡಿದ್ರೂ ಹಾರ ಹಾಕುವ ಸೌಜನ್ಯ ತೋರದೆ ಪುತ್ತಳಿಗೆ ಹಾರ ಎಸೆದು ಡಿಕೆ ಶಿವಕುಮಾರ್ ಮುಂದಕ್ಕೆ ಹೋಗಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಘಟನೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net