

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೆಗ್ಡೆ ಈ ಮಹಾಶಿವರಾತ್ರಿಯಂದು ಕೊಯಂಬತ್ತೂರಿನ ಇಶಾ ಫೌಂಡೇಶನ್ನ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಐಶ್ವರ್ಯಾ ಅವರು ಟಾಲಿವುಡ್ ನಟಿ ತಮನ್ನಾ ಜತೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಾಶಿವರಾತ್ರಿಯ ಮಹಾದಿನವನ್ನು ಕೊಯಂಬತ್ತೂರಿನ ಇಶಾ ಫೌಂಡೇಶನ್ನಲ್ಲಿ ಕಳೆದಿರುವ ಐಶ್ವರ್ಯಾ, ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ.
'ರೋಮಾಂಚಕ ನೃತ್ಯಗಳಿಂದ ಪ್ರಶಾಂತ ಗುಂಪಿನ ಧ್ಯಾನಗಳವರೆಗೆ, ಪ್ರತಿ ಕ್ಷಣವೂ ಲಕ್ಷಾಂತರ ಜನರನ್ನು ಎಚ್ಚರವಾಗಿಡಲು ಮತ್ತು ಪ್ರಪಂಚದಾದ್ಯಂತ ಸಂಪರ್ಕದಲ್ಲಿರಲು ಶಕ್ತಿಯನ್ನು ತುಂಬಿದೆ. ಜೊತೆಗೆ, 'ಹಿನ್ನೆಲೆ, ಲಿಂಗ ಅಥವಾ ರಾಷ್ಟ್ರೀಯತೆಯ ಹೊರತಾಗಿಯೂ, ನಾವು ಆಚರಿಸಲು ಒಟ್ಟುಗೂಡಿದ್ದೇವೆ. @isha.foundation ನಲ್ಲಿ ಒಬ್ಬರಿಗೊಬ್ಬರು ಸಬಲಗೊಳಿಸುವ ಮೂಲತತ್ವವನ್ನು ಎತ್ತಿ ಹಿಡಿಯಲು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಅಸಂಖ್ಯಾತ ಸ್ವಯಂಸೇವಕರ ಸಮರ್ಪಣೆಗೆ ಸಾಕ್ಷಿಯಾಗುವುದು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ' ಎಂದಿದ್ದಾರೆ. ಇಶಾದಲ್ಲಿ ಕಳೆದ ಕೆಲ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಐಶ್ವರ್ಯಾ ಸದ್ಗುರುವಿನೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದು. ನಟಿ ತಮನ್ನಾ ಭಾಟಿಯಾ ಜತೆ ಐಶ್ವರ್ಯಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ. ನಟಿ ಹಾಗೂ ಐಶ್ವರ್ಯಾ ಇಬ್ಬರೂ ಕೆಂಪು ಬಣ್ಣದ ಬಟ್ಟೆ ಧರಿಸಿ, 'ಕೋಯಿ ಕಹೇ ಕೆಹತಾ ರಹೇ' ಹಾಡನ್ನು ಜೋರಾಗಿ ಹೇಳುತ್ತಾ ಹೆಜ್ಜೆ ಹಾಕಿದ್ದಾರೆ.