ಬಿಜೆಪಿ ಸರ್ಕಾರ 90% ವಚನ ವಂಚನೆ ಮಾಡಿದೆ ಎಂದ ಕೆಪಿಸಿಸಿ ಅಧಕ್ಷ್ಯ

DKS
Published on

ಮೈಸೂರು: ‘ಬಿಜೆಪಿ ಸರ್ಕಾರ ಜನರಿಗೆ 90% ವಚನ ವಂಚನೆ ಮಾಡಿದೆ. ಜನರಿಗೆ ಕೊಟ್ಟ ಯಾವ ಕಾರ್ಯಕ್ರಮಗಳೂ ಜಾರಿಯಾಗಿಲ್ಲ. ನಾಳೆ ಮಂಡನೆ ಮಾಡುವ ಬಜೆಟ್ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ನಾಳೆ ಬೆಳಗ್ಗೆ ಬಜೆಟ್ ಘೋಷಣೆ ಮಾಡ್ತಾ ಇದ್ದಾರೆ. ಇದು ಕೊನೆಯ ಒಂದು ಬಜೆಟ್. ಬಿಜೆಪಿ ಸರ್ಕಾರ ಜನರಿಗೆ 90% ವಚನ ವಂಚನೆ ಮಾಡಿದೆ. ಇದನ್ನ ಶೀಘ್ರದಲ್ಲೇ ರೀಲೀಸ್ ಮಾಡುತ್ತೇವೆ. ನೀವು ಜನರಿಗೆ ಕೊಟ್ಟ ಯಾವ ಕಾರ್ಯಕ್ರಮಗಳೂ ಜಾರಿಯಾಗಿಲ್ಲ. ಹಿಂದಿನ ಬಜೆಟ್ ಕೂಡ ಬರಿ ಘೋಷಣೆ, ಭರವಸೆಯ ಬಜೆಟ್ ಆಗಿತ್ತು. ನಾವು ಡಬಲ್ ಇಂಜಿನ್ ಸರ್ಕಾರದಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದು ಬರಿ ಹೊಗೆ ಬಿಟ್ಟು ಹೋಯ್ತು. ಹೋದ ವರ್ಷ ಓದಿದ ಬಜೆಟ್, ಬಜೆಟ್ ಪಾಸ್ ಮಾಡಿದ ಎಲ್ಲವನ್ನೂ ನೋಡಿದ್ದೇವೆ. ಬಜೆಟ್ ಮುನ್ನ ಹಿಂದಿನ ವರ್ಷದ ಬಜೆಟ್ ನ ರಿಪೋರ್ಟ್ ಕೊಡಬೇಕು. ಬಸವರಾಜ ಬೊಮ್ಮಾಯಿ ನುಡಿದಂತೆ ನಡೆದಿದ್ದೇನೆ ಎನ್ನುತ್ತಾರೆ. ಹಾಗಾದರೇ ಹಿಂದಿನ ಬಜೆಟ್ ರಿಪೋರ್ಟ್ ಕೊಡಬೇಕು. ಬಸವಣ್ಣ ನವರ ಹೆಸರಿಟ್ಟುಕೊಂಡಿದ್ದೀರಿ. ಮೊದಲು ಹಿಂದಿನ ರಿಪೋರ್ಟ್ ಕೊಡಬೇಕು ಎಂದು ಆಗ್ರಹಿಸಿದರು.

ನಿಮ್ಮ ಪಕ್ಷದ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ ಶೇ 90 ರಷ್ಟುನ್ನ ಬಿಜೆಪಿ ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಯಡಿಯೂರಪ್ಪ ನವರು ರೈತರ ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿದರು. ಬರಿ ಸುಳ್ಳಿನ ಸರಮಾಲೆಯನ್ನ ಸೃಷ್ಟಿಸಿದರು. ರೈತ ನಿಧಿ ಎಲ್ಲಿಟ್ಟಿದ್ದೀರಿ, ರೈತರಿಗೆ ಎಲ್ಲಿ 10 ಗಂಟೆ ವಿದ್ಯುತ್ ಕೊಟ್ರಿ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ನಾವು ಸುಮಾರು 170 ಪ್ರಶ್ನೆ ಕೇಳಿದ್ದೇವೆ. ಆದರೆ ಸಿಎಂ ಬೊಮ್ಮಾಯಿ ಸರ್ಕಾರ ಒಂದಕ್ಕೂ ಉತ್ತರ ನೀಡಿಲ್ಲ. ಸುಳ್ಳು ಹೇಳಲು ಒಂದು ಮಿತಿ ಇರಬೇಕು. ಅಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದ್ರಿ.ಜನರಿಗೆ ವಂಚನೆ ಮಾಡಿಕೊಂಡು ಬಂದಿರಿ. ನೀವು ಅಧಿಕಾರದಲ್ಲಿರಲು ಲಾಯಕ್ಕಿಲ್ಲ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net