

ಬೆಂಗಳೂರು ಡಿ. ಕೆ. ಶಿವಕುಮಾರ್ ಕ್ರಿಯಾಶೀಲ ವ್ಯಕ್ತಿ. ನನಗಿಂತಲೂ ಉತ್ತಮ ಸಂಘಟಕ. ನಾನು ಶಿವಕುಮಾರ್‌ಗಿಂತಲೂ ಮೊದಲು ರಾಜಕಾರಣಕ್ಕೆ ಬಂದು ಜೆಡಿಎಸ್‌ನ ರಾಜ್ಯಾಧ್ಯಕ್ಷನಾಗಿದ್ದೆ. ಆದರೆ ಸಂಘಟನೆಯಲ್ಲಿ ಶಿವಕುಮಾರ್ ಹೆಚ್ಚು ಸಮರ್ಥರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಸಿದರು.
ಭಾನುವಾರ ಬೆಂಗಳೂರು ಪ್ರೆಸ್‌ಕ್ಲಬ್‌ನ 2023ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.