ಎಸ್​ಡಿಪಿಐ ಪುಂಡರನ್ನು ರಕ್ಷಿಸಲು ದಿನೇಶ್​ ಗುಂಡೂರಾವ್​ಗೆ ಮನೆಯಲ್ಲಿ ಒತ್ತಡ; ಪ್ರತಾಪ್​ ಸಿಂಹ

pratap simha
Published on

ಕೊಡಗು: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ಭೈರಸಂದ್ರದಲ್ಲಿ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದು ಎಸ್​ಡಿಪಿಐನ ಪುಂಡರು. ಎಸ್​ಡಿಪಿಐ ಮತ್ತು ಪಿಎಫ್‌ಐ ಅನ್ನು ನಿಷೇಧಿಸಬೇಕು ಎಂದು ಸಂಸದ ಪ್ರತಾಪ್​ ಸಿಂಹ ಆಗ್ರಹಿಸಿದ್ದಾರೆ.

ಎಸ್​ಡಿಪಿಐ ನಿಷೇಧದಬಗ್ಗೆ ಗೃಹ ಸಚಿವರೇ ಸ್ಪಷ್ಟವಾಗಿ ಹೇಳಿದ್ದಾರೆ. ಮಂಗಳೂರು ಘಟನೆ ನಂತರ ಆ ಪ್ರಕ್ರಿಯೆ ಶುರುವಾಗಿದೆ. ಬೆಂಗಳೂರು ಗಲಭೆಯಲ್ಲಿ ಎಸ್​ಡಿಪಿಐ ಕುಕೃತ್ಯದ ಬಗ್ಗೆ ಪೂರಕ ದಾಖಲೆಗಳಿದ್ದು, ಈ ಸಂಘಟನೆ ನಿಷೇಧ ಆಗುತ್ತದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಮೇಲೆ ವಿಶ್ವಾಸ ಇದೆ ಎಂದು ಭಾಗಮಂಡಲದಲ್ಲಿ ಹೇಳಿದರು.

ಕಾಂಗ್ರೆಸ್​ನ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಶಿಕ್ಷಣವಂತರು, ಒಳ್ಳೆಯ ಹಿನ್ನೆಲೆ ಇರುವವರು. ಆದ್ರೆ ಯಾವಾಗಲೂ ಜನರ ದಾರಿ ತಪ್ಪಿಸುತ್ತಿರುತ್ತಾರೆ ಎಂದು ಪ್ರತಾಪ್​ ಸಿಂಹ ಕುಟುಕಿದರು. ಕಾಂಗ್ರೆಸ್ ಶಾಸಕರ ಮನೆ ಮೇಲೆ ಎಸ್​ಡಿಪಿಐ ದಾಂಧಲೆ ನಡೆಸಿದೆ. ಆದರೂ ದಿನೇಶ್ ಗುಂಡೂರಾವ್​ಗೆ ಆ ಸಂಘಟನೆ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ದರ್ದು ಏನಿದೆ? ಎಂದು ಪ್ರಶ್ನಿಸಿದ ಪ್ರತಾಪ್​ ಸಿಂಹ, ಅವರಿಗೆ ಮನೆಯಲ್ಲಿ ಒತ್ತಡ ಇರಬಹುದೇನೋ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net