

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ಭೈರಸಂದ್ರ ಗಲಭೆಯಲ್ಲಿ ಮನೆ ಕಳೆದುಕೊಂಡ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ದಿಗ್ವಿಜಯ ಸುದ್ದಿ ವಾಹಿನಿ ಜತೆ ಮಾತನಾಡಿದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್, ಕಿಡಿಗೇಡಿಗಳು ನನ್ನ ಮನೆಗೆ ಬೆಂಕಿ ಇಟ್ಟರು. ಗಲಭೆ ನಡೆದು
ನಾನು ಯಾರ ಜತೆಗೂ ದ್ವೇಷ ಸಾಧಿಸಿಲ್ಲ, ಎಲ್ಲರ ಜತೆಗೂ ಸಾಮರಸ್ಯದಿಂದ ಇದ್ದೆ. ಯಾರು ದಾಳಿ ಮಾಡಿದ್ದಾರೋ ಅವರ ಮೇಲೆ ಪೋಲಿಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದರು.
ಡಿಜೆ ಹಳ್ಳಿ ಗಲಭೆ ಬಗ್ಗೆ ಇಂದು(ಶನಿವಾರ) ಬೆಳಗ್ಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಬಿಜೆಪಿಯೊಳಗೆ ಸಾಕಷ್ಟು ಆಂತರಿಕ ಕಚ್ಚಾಟ ಇದೆ. ಅವರ ಒಳ ತಂತ್ರದಿಂದಲೇ ಗಲಭೆ ನಡೆದಿದೆ ಎಂದು ಆರೋಪಿಸಿದ್ದರು. ಬಿಜೆಪಿಯವ್ರು ನಮ್ಮ ಕಾರ್ಪೋರೇಟರ್ಗಳಿಗೆ ಪೊಲೀಸರಿಂದ ಹೆದರಿಸುತ್ತಿದ್ದಾರೆ. ಇದೇ ಹೇಳಿಕೆ ಕೊಡಬೇಕು ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಮೇಲೆ ಬಿಜೆಪಿ ಒತ್ತಡ ಹಾಕ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದರು. ಇದರ ಬೆನ್ನಲ್ಲೇ ಡಿಕೆಶಿ ಹೇಳಿಕೆಯನ್ನು ಶಾಸಕರು ತಳ್ಳಿ ಹಾಕಿದ್ದಾರೆ.