

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ಭೈರಸಂದ್ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
‘ಗಲಭೆಯ ಪ್ರಮುಖ ಆರೋಪಿ, ಎಸ್ಡಿಪಿಐ ಕಾರ್ಯಕರ್ತ ಖಾಲಿದ್ನನ್ನು ಬುಧವಾರ ತಡರಾತ್ರಿ ಡಿಜೆ ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡಿಜೆ ಹಳ್ಳಿಯ ರೋಷನ್ನಗರ ನಿವಾಸಿ ಖಾಲೀದ್, ಎಸ್ಡಿಪಿಐ ಕಾರ್ಯಕರ್ತರನ್ನು ಒಗ್ಗೂಡಿಸಿ ಮುಜಾಮಿಲ್ ಮತ್ತು ಅಯಾಜ್, ಆಫ್ನಾನ್ ಜೊತೆಗೂಡಿ ಗಲಭೆ ಮಾಡಿಸಿದ್ದ ಆರೋಪ ಎದುರಿಸುತ್ತಿದ್ದಾನೆ.
ಇದನ್ನೂ ಓದಿರಿ ಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್ ಸಾವು
ಖಾಲಿದ್ ನನ್ನು ತಡರಾತ್ರಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಖಾಲಿದ್ ಜೊತೆ ಹಲವು ಪ್ರಮುಖ ರಾಜಕೀಯ ನಾಯಕರು ಸಂಪರ್ಕದಲ್ಲಿರುವ ಮಾಹಿತಿ ಸಿಕ್ಕಿದೆ. ಗಲಭೆ ನಡೆಯುವ ದಿನ ಖಾಲಿದ್ ಯುಟ್ಯೂಬ್ ಚಾನೆಲ್ವೊಂದಕ್ಕೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಮೊನ್ನೆಯಷ್ಟೇ(ಮಂಗಳವಾರ) ಗಲಭೆಯ ರೂವಾರಿ ಎನ್ನಲಾದ ವಾಜೀದ್ ಸಿಸಿಬಿ ಬಲೆಗೆ ಬಿದ್ದಿದ್ದ. ಈತನನ್ನು ತೀವ್ರ ವಿಚಾರಣೆ ನಡೆಸಿದಾಗ ತನ್ನ ಸಹಚರರ ಬಗ್ಗೆ ಈತ ಸುಳಿವು ನೀಡಿದ್ದ. ಈ ಆಧಾರದ ಮೇಲೆ ನಗರದ ರಹಸ್ಯ ಸ್ಥಳವೊಂದರಲ್ಲಿ ಅಡಗಿ ಕುಳಿತಿದ್ದ ತೌಸಿಫ್, ಫಾಜಿಲ್, ಅಫ್ಜಲ್ ಹಾಗೂ ಪಾಷಾ ಎಂಬುವವರನ್ನೂ ಬುಧವಾರ ಬಂಧಿಸಿದ್ದರು.