

Diwali Firecrackers: ದೀಪಾವಳಿ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಹಿ ಅಡಿಗೆ ಮಾಡಿ ದೇವರ ಪೂಜೆ ಮಾಡಿ ಸಂಭ್ರಮಿಸುವುದರ ಜತೆಗೆ ಪಟಾಕಿ ಸಿಡಿಸಿ ಆಚರಿಸಲಾಗುತ್ತದೆ. ಇದರಿಂದ ವಾಯು ಮಾಲಿನ್ಯವಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಶಬ್ದ ಮಾಲಿನ್ಯ ಕೂಡ ತುಂಬಾ ಅಪಾಯಕಾರಿ ಎಂಬುದು ನಿಮಗೆ ಗೊತ್ತಾ.? ಶಬ್ದ ಮಾಲಿನ್ಯವು ಕಿವಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.
ಕರ್ಕಶ ಶಬ್ದಗಳ ಮಧ್ಯೆಯೇ ಕಾಲ ಕಳೆಯುವವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಗಟ್ಟಿಯಾದ ಶಬ್ದಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕಿವಿಯ ಒಳಪದರಕ್ಕೆ ಹಾನಿಯಾಗುತ್ತದೆ. ಇದರಿಂದಾಗಿ ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಅದು ಸಂಪೂರ್ಣವಾಗಿ ಕಳೆದುಹೋಗಬಹುದು.
ಯಾವಾಗಲೂ ಹೆಚ್ಚಿನ ಧ್ವನಿಯಲ್ಲಿ ಸಂಗೀತವನ್ನು ಕೇಳುವ ಜನರಲ್ಲಿ ಕಿವುಡುತನ ಸಮಸ್ಯೆಯು ತ್ವರಿತವಾಗಿ ಸಂಭವಿಸುತ್ತದೆ. ಶಬ್ದವನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅದರಲ್ಲೂ ಹೆಡ್ ಸೆಟ್ ನಲ್ಲಿ ಹೆಚ್ಚು ವಾಲ್ಯೂಮ್ ಹಾಕಿಕೊಂಡು ಕೇಳುವುದು ಒಳ್ಳೆಯದಲ್ಲ.
ದೊಡ್ಡ ಶಬ್ದಗಳು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ಆಯಾಸ, ಕಿರಿಕಿರಿ, ಏಕಾಗ್ರತೆಯ ಕೊರತೆಯಂತಹ ಹಲವು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.
ದೀರ್ಘಕಾಲದವರೆಗೆ ಶಬ್ದ ಮಾಲಿನ್ಯಕ್ಕೆ ಒಳಗಾಗುವ ಜನರು ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿದ ಹೃದಯ ಬಡಿತದಂತಹ ಅಪಾಯಕಾರಿ ಪರಿಸ್ಥಿತಿಗಳನ್ನು ಎದುರಿಸುತ್ತಾರೆ.
ಜೋರಾದ ಶಬ್ದಗಳಿಗೆ ತೆರೆದುಕೊಳ್ಳುವವರು ಹೆಚ್ಚು ಒತ್ತಡ ಮತ್ತು ಆತಂಕವನ್ನು ಹೊಂದಿರುತ್ತಾರೆ. ಅವರಲ್ಲಿ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿರುವ ಸಾಧ್ಯತೆಗಳಿವೆ.
ಗಮನಿಸಿ: ಮೇಲಿನ ಮಾಹಿತಿಯು ಮೂಲಭೂತ ಮಾಹಿತಿಗಾಗಿ ಮಾತ್ರ. ಆರೋಗ್ಯದ ವಿಷಯದಲ್ಲಿ ವೈದ್ಯರ ಸೂಚನೆಗಳನ್ನು ಪಾಲಿಸುವುದು ಉತ್ತಮ.