Diwali bonus: ಬೋನಸ್ ಕೊಡೋದಾದ್ರೆ ಹೀಗೆ ಕೊಡ್ಬೇಕು! ಸಿಬ್ಬಂದಿ ಕುಟುಂಬಕ್ಕೆ ರಾಜಮರ್ಯಾದೆ ನೀಡಿದ ಸೂರತ್​ನ ಬಿಜಿನೆಸ್‌ಮ್ಯಾನ್!

Diwali Bonus
ಸಿಬ್ಬಂದಿಗೆ 1 ಲಕ್ಷ ರೂ. ದೀಪಾವಳಿ ಬೋನಸ್ ಕೊಟ್ಟ ಸೂರತ್ ಉದ್ಯಮಿ
Published on: 

Gujarat Diwali Bonus: ಗುಜರಾತ್‌ನ ಸೂರತ್‌ನಲ್ಲಿ ಜವಳಿ ಅಂಗಡಿಯ ಮಾಲೀಕರೊಬ್ಬರು ತಮ್ಮ ಬಳಿಯಿದ್ದ ಸುಮಾರು 20 ಸಿಬ್ಬಂದಿಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಿಶಿಷ್ಟ ಹಾಗೂ ರಾಜಾತಿಥ್ಯದ ಶೈಲಿಯಲ್ಲಿ ಬೋನಸ್ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುವುದರೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

ಗುಜರಾತ್‌ನ ಸೂರತ್‌ನಲ್ಲಿರುವ ಮೋಟಾ ವರಾಛಾ ಪ್ರದೇಶದ ಸುದಾಮಾ ಚೌಕ್‌ನಲ್ಲಿ ವಿನೂತನ ಹಾಗೂ ಮಾದರಿ ಘಟನೆಯೊಂದು ನಡೆದಿದೆ. 'ಮಹಾದೇವ್ ಕ್ಲೋತ್ ಸೆಂಟರ್' ಜವಳಿ ಅಂಗಡಿಯ ಮಾಲೀಕ ರಾಮಸ್ವರೂಪ್ ಮುಂಡೆ ಅವರು, ತಮ್ಮ ಬಳಿ ಕೆಲಸ ಮಾಡುವ ಸಿಬ್ಬಂದಿಗೆ ಗರಿಗರಿಯಾದ ನೋಟುಗಳ ಕಂತೆಗಳನ್ನು ದೀಪಾವಳಿ ಬೋನಸ್ ಆಗಿ ನೀಡಿ ಮೆಚ್ಚುಗೆ ಗಳಿಸಿದ್ದಾರೆ

ಸಾಮಾನ್ಯವಾಗಿ ಎಲ್ಲೆಡೆ ಕವರ್‌ಗಳಲ್ಲಿ ಹಣ ನೀಡುವುದು ವಾಡಿಕೆ. ಆದರೆ ರಾಮಸ್ವರೂಪ್ ಅವರು ಬೆಳ್ಳಿಯ ಬಣ್ಣದ ಪೂಜಾ ತಟ್ಟೆಗಳಲ್ಲಿ ರೂ. 10 ರಿಂದ ರೂ. 500 ರವರೆಗಿನ ಹೊಸ ಹಾಗೂ ಗರಿಗರಿಯಾದ ನೋಟುಗಳ ಕಂತೆಗಳನ್ನು ಕಲಾತ್ಮಕವಾಗಿ ಜೋಡಿಸಿ ಇಟ್ಟಿದ್ದರು. ಪ್ರತಿಯೊಬ್ಬ ಉದ್ಯೋಗಿಗೂ ತಲಾ ರೂ. 1 ಲಕ್ಷಕ್ಕೂ ಅಧಿಕ ನಗದು ಹಣವನ್ನು ಬೋನಸ್ ರೂಪದಲ್ಲಿ ನೀಡಲಾಗಿದೆ.

ಇನ್ನು ವಿಶೇಷವೆಂದರೆ, ಈ ಬೋನಸ್ ತಟ್ಟೆಯನ್ನು ನೇರವಾಗಿ ಉದ್ಯೋಗಿಗಳಿಗೆ ನೀಡದೆ, ಅವರ ಹೆಂಡತಿಯರ ಕೈಯಿಂದ ಕೊಡಿಸುವ ಮೂಲಕ ಕುಟುಂಬಕ್ಕೆ ದೊಡ್ಡ ಗೌರವ ಸಲ್ಲಿಸಲಾಗಿದೆ. ಮಾಲೀಕರ ಈ ದಯಾಪರತೆ ಮತ್ತು ಗೌರವಯುತ ನಡವಳಿಕೆಯನ್ನು ಕಂಡು ಅನೇಕ ಉದ್ಯೋಗಿಗಳು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ತಲೆ ಹೇನುಗಳ ಕಾಟದಿಂದ ಕಿರಿಕಿರಿನಾ? ಇವು ಯಾಕೆ ಬರುತ್ತೆ, ಬಡಿಸಿಕೊಳ್ಳೋದು ಹೇಗೆ? | Head Lice Remedies

ಸದ್ಯ ಈ ಅಪರೂಪದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಉದ್ಯಮಿಯ ದೊಡ್ಡ ಮನಸ್ಸನ್ನು ಕೊಂಡಾಡುತ್ತಿದ್ದಾರೆ.