

ಅಮೆರಿಕಾ: ( Divorced Couple ) ಡಿವೋರ್ಸ್ ಪಡೆದುಕೊಂಡು ದೂರವಾಗಿದ್ದ ದಂಪತಿ ಮತ್ತೆ ಈಗ ಒಂದಾಗಿದ್ದಾರೆ. ಡಿವೋರ್ಸ್ ಪಡೆದು ಬರೋಬ್ಬರಿ 50 ವರ್ಷಗಳ ನಂತರ ಈಗ, ಮತ್ತೊಮ್ಮೆ ಈ ಇಬ್ಬರೂ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದೆ.
ಫೇ ಗೇಬಲ್ ಮತ್ತು ರಾಬರ್ಟ್ ವೆನ್ರಿಚ್ ಅನ್ನೋರು 1951ರಲ್ಲಿ ಆಗಿನ ಕಾಲದಲ್ಲೇ ಲವ್ ಮಾಡಿ, ಮದುವೆ ಆಗಿದ್ದರು. ಈ ದಂಪತಿಗೆ 4 ಜನ ಮಕ್ಕಳು ಕೂಡ ಇದ್ದರು. ಕೆಲ ವರ್ಷಗಳ ನಂತರ, ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಶುರುವಾಗಿತ್ತು. 1975ರಲ್ಲಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿ, ಡಿವೋರ್ಸ್ ಕೂಡ ಪಡೆದುಕೊಂಡಿದ್ದರು. ಅದಾದ್ಮೇಲೆ, ಈ ಇಬ್ಬರು ಬೇರೆ ಬೇರೆ ಮದುವೆ ಕೂಡ ಆಗ್ತಾರೆ. ಅವರವರ ಸಂಗಾತಿಗಳು ಸಾವನ್ನಪ್ಪಿದ್ದಾರೆ.
ಈಗ ತಮ್ಮ ಇಳಿ ವಯಸ್ಸಲ್ಲಿ ಇವರಿಬ್ಬರು ಮತ್ತೊಮ್ಮೆ ಒಂದಾಗಿದ್ದಾರೆ. ಇವ್ರಿಬ್ಬರಿಗೂ ವಯಸ್ಸು ಕೇಳಿದ್ರೇ ಶಾಕ್ ಆಗ್ತೀರಾ. ತಾತ ವೆನ್ರಿಚ್ ಅವರಿಗೆ 94 ವರ್ಷ ಆಗಿದ್ದು, ಅಜ್ಜಿ ಫೇ ಗೇಬಲ್ ಅವರಿಗೆ 89 ವರ್ಷ ವಯಸ್ಸಾಗಿದೆ. ಅಮೆರಿಕಾದ ಪೆನ್ಸಿಲ್ವೇನಿಯಾದ ಡಿವೋರ್ಸ್ಡ್ ದಂಪತಿ, ಡಿವೋರ್ಸ್ ಪಡೆದು ದೂರ ದೂರವಾಗಿದ್ದ ಈ ದಂಪತಿ ಇದೀಗ ಒಂದಾಗಿದ್ದು, ಬರೋಬ್ಬರಿ 50 ವರ್ಷಗಳ ಬಳಿಕ, ಇಳಿ ವಯಸ್ಸಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮತ್ತೆ ಮದುವೆಯಾಗಿದ್ದಾರೆ.
ಈ ಡಿವೋರ್ಸ್ಡ್ ಮದುವೆ ಬಗ್ಗೆ ರಿಯಾಕ್ಟ್ ಮಾಡಿದ 94 ವರ್ಷದ ವೆನ್ರಿಚ್, ಆಕೆ, ನನ್ನ ಜೀವನದ ಮೊದಲ ಪ್ರೀತಿ, ಆಕೆಯನ್ನು ನಾನು ಮತ್ತೆ ಪಡೀತೀನಿ ಅಂತ ನಾನು ಎಕ್ಸ್ಪೆಕ್ಟ್ ಇರಲಿಲ್ಲ. ಇದೀಗ ಮತ್ತೊಮ್ಮೆ ಅವಳು ನನಗೆ ಸಿಕ್ಕಿದ್ದು ಬಹಳ ಖುಷಿಯಾಗಿದೆ ಎಂದಿದ್ದಾರೆ.