

ಹಾವೇರಿ: ವಿಚ್ಛೇದನ ಪ್ರಕರಣ ಇನ್ನೂ ಬಗೆಹರಿಯಲಿಲ್ಲವೆಂದು ಬೇಸತ್ತು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ನೀಲಮ್ಮ ರಾಮಚಂದ್ರ ಭಟ್ (30) ಮೃತ ಮಹಿಳೆ.
ಇವರು ತನ್ನ ಪತಿಯಿಂದ ವಿಚ್ಛೇದನ ಹಾಕಿಕೊಂಡಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ, ಈವರೆಗೂ ಪ್ರಕರಣ ಬಗೆಹರಿಯುತ್ತಿಲ್ಲವೆಂದು ಮನನೊಂದು ಮನೆಯಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.