ಜಿಲ್ಲೆಗೆ ಟಾಪರ್ ಬಂದ ವಿದ್ಯಾರ್ಥಿನಿಗೆ ಸನ್ಮಾನ

11 HANUR 2
ದಿನ್ನಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿನಿ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು. ಶಾಂತರಾಜು, ಕೃಷ್ಣನಾಯಕ್, ರವಿನಾಯ್ಕ, ಮುರುಗೇಶ್ ಇತರರು ಇದ್ದರು.
Published on

ಹನೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 587 ಅಂಕವನ್ನು ಗಳಿಸಿ ಜಿಲ್ಲೆಯ ಟಾಪರ್ ಆದ ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದ ಅಶ್ವಿನಿ ಅವರನ್ನು ಗುರುವಾರ ಜಿಲ್ಲಾ ಲಂಬಾಣಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕಿನ ದಿನ್ನಳ್ಳಿ ಗ್ರಾಮದ ತನುಜಾಬಾಯಿ ಹಾಗೂ ಬಸವರಾಜು ನಾಯಕ್ ದಂಪತಿ ಪುತ್ರಿ ಅಶ್ವಿನಿ ಅವರು ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು, ವಿದ್ಯಾರ್ಥಿ ನಿಲಯದಲ್ಲೇ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿರುವುದು ಗ್ರಾಮಸ್ಥರಿಗೆ ಹಾಗೂ ಸಮುದಾಯಕ್ಕೆ ಸಂದ ಗೌರವವಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿನಿ ಅಶ್ವಿನಿ ಮಾತನಾಡಿ, ತಂದೆ, ತಾಯಿ ಕೂಲಿ ಕೆಲಸ ಮಾಡಿಕೊಂಡು ನನಗೆ ಶಿಕ್ಷಣ ಕೊಡಿಸಿದ್ದರು. ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿರುವುದು ನಿಜಕ್ಕೂ ಸಾರ್ಥಕತೆ ಎನಿಸಿದೆ. ಮುಂದಿನ ದಿನಗಳಲ್ಲಿ ಬಡತನವನ್ನು ಮೆಟ್ಟಿ ನಿಂತು ಶಿಕ್ಷಣ ಕಡೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಪದವಿಯಲ್ಲಿ ಇನ್ನೂ ಉತ್ತಮ ಅಂ ಪಡೆದು ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಯಾಗುವ ಮನದಾಸೆಯನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಸಾಧನೆಗೆ ಕಾರಣರಾದ ಪಾಲಕರು, ಶಿಕ್ಷಕರು, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್ ದತ್ತೇಶ್‌ಕುಮಾರ್ ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಲಂಬಾಣಿ ನೌಕರರ ಸಂಘದ ಅಧ್ಯಕ್ಷ ಶಾಂತರಾಜು, ಪದಾಧಿಕಾರಿಗಳಾದ ಕೃಷ್ಣನಾಯಕ್, ಶಿವಕುಮಾರ್ ನಾಯ್ಕ, ಮುಖಂಡರಾದ ರವಿನಾಯಕ್, ಮುರುಗೇಶ್, ವಾಲುನಾಯಕ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net