ಅನಾಥ ಅಂಗವಿಕಲನ ವರಿಸಿದ ವಧು, ಮದುವೆಗೆ ನೆರವಾದ ಮಹಿಳಾ ಸಂಘಟನೆ

psychically handicap marriage in koppal love story
ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಶುಕ್ರವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕವಿತಾ-ಅಂಜಿನಪ್ಪ.
Published on

ಕೊಪ್ಪಳ: ತನ್ನ ಅಣ್ಣ ಕೊಟ್ಟ ಮಾತು ಉಳಿಸಿಕೊಳ್ಳಲು ಅಣ್ಣನ ಅಂಗವಿಕಲ ಸ್ನೇಹಿತನನ್ನು ವಧುವೊಬ್ಬಳು ವರಿಸಿದ್ದಾಳೆ. ಬಡವರಾದ ಇವರಿಗೆ ಸಂಪ್ರದಾಯದಂತೆ ಮಹಿಳಾ ಸಂಘಟನೆಯೊಂದು ಮದುವೆ ಮಾಡಿದ ಟನೆಗೆ ತಾಲೂಕಿನ ಭಾಗ್ಯನಗರ ಕಲ್ಯಾಣ ಮಂಟಪ ಶುಕ್ರವಾರ ಸಾಯಾಯಿತು.

ಕವಿತಾ ಹಾಗೂ ಅಂಜನಪ್ಪ ನವ ದಂಪತಿ. ಮೂಲತ: ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಜುಬ್ಬೊನಹಳ್ಳಿಯ ಅಂಜನಪ್ಪ, ತಂದೆ-ತಾಯಯನ್ನು ಕಳೆದುಕೊಂಡು ಕೆಲ ವರ್ಷದ ಹಿಂದೆ ಕೊಪ್ಪಳಕ್ಕೆ ಬಂದಿದ್ದಾನೆ. ಆರಂಭದಲ್ಲಿ ಕೃಷ್ಣ ಭವನ ಹೋಟೆಲ್​ನಲ್ಲಿ ಕೆಲಸ ಮಾಡಿ, ಸದ್ಯ ಡಿ.ಎಸ್​.ಕೆೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಮದುವೆಯಾದ ಕವಿತಾಳ ಅಣ್ಣ ಹಾಗೂ ಅಂಜನಪ್ಪ ಇಬ್ಬರು ಸ್ನೇಹಿತರು. ಮೂರು ವರ್ಷದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮೊದಲ ಬಾರಿ ಕವಿತಾಳ ಅಣ್ಣ ಅಂಜಿನಪ್ಪನಿಗೆ ಪರಿಚಯಿಸಿದ್ದಾನೆ. ತನ್ನ ತಂಗಿಯನ್ನು ಮದುವೆ ಮಾಡಿಕೊಳ್ಳುವಂತೆ ತಿಳಿಸಿದ್ದನು.

ಆದರೆ, ಕೆಲ ತಿಂಗಳ ಹಿಂದೆ ಕವಿತಾಳ ಅಣ್ಣ ಮೃತಪಟ್ಟಿದ್ದಾನೆ. ಆಗಿನಿಂದ ಅಂಜಿನಪ್ಪ ಕವಿತಾ ಹಾಗೂ ಅವರ ತಾಯಿಯೊಡನೆ ಕಲ್ಯಾಣ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ತನ್ನ ಅಣ್ಣ ಅಂಜಿನಪ್ಪನಿಗೆ ಕೊಟ್ಟ ಮಾತಿನಂತೆ ಕವಿತಾ ಅಂಜಿನಪ್ಪನನ್ನು ಮದುವೆಯಾಗಲು ಒಪ್ಪಿದ್ದಾಳೆ. ಈಕೆಯೂ ಖಾಸಗಿ ಶಾಲೆಯೊಂದರಲ್ಲಿ ಆಯಾ ಕೆಲಸ ಮಾಡುತ್ತಿದ್ದಾಳೆ. ಬಡತನದಲ್ಲಿದ್ದ ಇವರ ಮದುವೆಗೆ ಭಾಗ್ಯನಗರ ಇನ್ನರ್​ವ್ಹೀಲ್​ ಕ್ಲಬ್​ ಪದಾಧಿಕಾರಿಗಳು ಇಬ್ಬರಿಗೂ ಶುಕ್ರವಾರ ಸಂಪ್ರದಾಯದಂತೆ ಶಾಸೊಕ್ತವಾಗಿ ಮದುವೆ ಮಾಡಿಸಿ ಮಾದರಿಯಾಗಿದ್ದಾರೆ. ಅಂಜನಪ್ಪ ಪರಿಶಿಷ್ಟ ಪಂಡಗಕ್ಕೆ ಸೇರಿದ್ದರೆ, ಕವಿತಾ ಪರಿಶಿಷ್ಟ ಜಾತಿಗೆ ಸೇರಿದ್ದಾಳೆ.

ನಾವಿಬ್ಬರು ಮದುವೆಯಾಗಬೇಕೆಂದು ಅಂದುಕೊಂಡಿದ್ದೆವು. ಆದರೆ, ಬಡತನ ಕಾರಣ ಆಗಿರಲಿಲ್ಲ. ಇನ್ನರ್​ ವ್ಹೀಲ್​ ಕ್ಲಬ್​ ಅಧ್ಯಕ್ಷೆ ಶಾರದಾ ಪಾನಘಂಟಿ ಮತ್ತು ಕ್ಲಬ್​ನ ಪದಾಧಿಕಾರಿಗಳು ನಮ್ಮ ಕುಟುಂಬದವರಂತೆ ಜತೆಗಿದ್ದು ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ನಾವು ಅವರಿಗೆ ಋನಿ. ಕವಿತಾ, ಅಂಜನಪ್ಪ. ನವ ದಂಪತಿ.

ಕವಿತಾ, ಅಂಜನಪ್ಪ. ನವ ದಂಪತಿ.

ಕ್ಲಬ್​ನಿಂದ ಅಂಗವಿಕಲರಿಗೆ ಮದುವೆ ಮಾಡಿಸುವ ಯೋಜನೆ ಇತ್ತು. 2-3 ದಿನದ ಹಿಂದೆ ಕವಿತಾ, ಅಂಜನಪ್ಪ ವಿಷಯ ತಿಳಿಯಿತು. ಎಲ್ಲ ತಯಾರಿ ಮಾಡಿಕೊಂಡು ಮದುವೆ ಮಾಡಿಸಿದ್ದೇವೆ. ಶಾರದಾ ಪಾನಘಂಟಿ, ಭಾಗ್ಯನಗರ ಇನ್ನರ್​ವ್ಹೀಲ್​ ಕ್ಲಬ್​

ಶಾರದಾ ಪಾನಘಂಟಿ, ಭಾಗ್ಯನಗರ ಇನ್ನರ್​ವ್ಹೀಲ್​ ಕ್ಲಬ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net