ಅಗತ್ಯವಿದ್ದಲ್ಲಿ ಚೆಕ್​ಪೋಸ್ಟ್​ ನಿರ್ಮಿಸಿ, ಡಿಸಿ ನಲಿನ್​ ಅತುಲ್​ ಸೂಚನೆ

election meeting in koppal dc naleen athul and AROs participate
ಕೊಪ್ಪಳದಲ್ಲಿ ಸೋಮವಾರ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ್​ ಮಾಲಗಿತ್ತಿ, ಸಹಾಯಕ ಚುನಾವಣಾಧಿಕಾರಿಗಳು ಇತರ ಸಿಬ್ಬಂದಿ ಇದ್ದರು.
Published on

ಕೊಪ್ಪಳ: ಜಿಲ್ಲೆಯಲ್ಲಿ ಈಗಾಗಲೇ ಚೆಕ್​ಪೋಸ್ಟ್​ ನಿರ್ಮಿಸಲಾಗಿದೆ. ಇನ್ನು ಅಗತ್ಯವಿದೆ ಎನಿಸಿದಲ್ಲಿ ಚೆಕ್​ಪೋಸ್ಟ್​ ನಿರ್ಮಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಚೆಕ್​ಪೋಸ್ಟ್​ಗಳ್ಲಿ ಸೂಕ್ತ ನೆರಳು, ಶುದ್ಧ ಕುಡಿವ ನೀರು, ಸಿಬ್ಬಂದಿಗೆ ರಿಪ್ಲೆಕ್ಷನ್​ ಬ್ಯಾಡ್ಜ್​, ಬ್ಯಾರಿಕೇಡ್​ಗಳಿಗೆ ಪ್ರತಿಫಲಿತ ಸ್ಟಿಕ್ಕರ್​ ಅಂಟಿಸಿ. ಇದರಿಂದ ರಾತ್ರಿ ಸಮಯದಲ್ಲಿ ಸಿಬ್ಬಂದಿ ಸುರಕ್ಷತೆ ಹಾಗೂ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ. ಸಿವಿಜಿಲ್​ನಲ್ಲಿ ಬರುವ ದೂರಿಗೆ 100 ನಿಮಿಷದಲ್ಲಿ ಪರಿಹಾರ ಒದಗಿಸಿ. ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮಾಧ್ಯಮ ಮೇಲ್ವಿಚಾರಣಾ ಸಮಿತಿಯಿಂದ ನಿತ್ಯ ಬರುವ ಪೇಯ್ಡ್​ ನ್ಯೂಸ್​, ಜಾಹೀರಾತುಗಳ ಮೇಲೆ ನಿಗಾವಹಿಸಿ. ದಿನಪತ್ರಿಕೆಗಳು, ಸುದ್ದಿ ವಾಹಿನಿಗಳನ್ನು ಗಮನಿಸಿ. ಸೆಕ್ಟರ್​ ಅಧಿಕಾರಿಗಳಿಗೆ ಸೂಕ್ತ ವಾಹನದ ವ್ಯವಸ್ಥೆ ಕಲ್ಪಿಸಿ ಎಂದರು.

85 ವರ್ಷ ಮೇಲ್ಪಟ್ಟ, ವಿಕಲಚೇತನರು ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗೆ ನಮೂನೆ 12, 12ಎ ಹಾಗೂ 12ಡಿ ಒದಗಿಸಲು ಎಆರ್​ಒಗಳು ಕ್ರಮವಹಿಸಿ. ಅಂಚೆ ಮತ ಪತ್ರ ನೋಡಲ್​ ಅಧಿಕಾರಿಗಳು ಅರ್ಹರಿಗೆ ಅಂಚೆ ಮತ ಪತ್ರ ಒದಗಿಸಲು ಸಹಕಾರಿಯಾಗುವಂತೆ ಅಗತ್ಯ ಸಲಹೆ, ಸೂಚನೆಗಳನ್ನು ಎಲ್ಲ ಇಲಾಖೆ ಅಧಿಕಾರಿಗಳಿಗೆ ನೀಡಿ. ಎಲ್ಲ ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳಿರುವ ಬಗ್ಗೆ ಮತ್ತೊಮ್ಮೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಎಆರ್​ಒಗಳಿಗೆ ತಾಕೀತು ಮಾಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ್​ ಮಾಲಗಿತ್ತಿ, ಸಹಾಯಕ ಚುನಾವಣಾಧಿಕಾರಿಗಳು ಇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net