ಸಮ್ಮೇಳಾಧ್ಯಕ್ಷ ಜೆ.ಎಂ. ಮಠದ ಅವರನ್ನು ಸನ್ಮಾನಿಸಿ, ಆಹ್ವಾನ

30-RNR-05
Published on

ರಾಣೆಬೆನ್ನೂರ: ನಗರದಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ 13ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಇಲ್ಲಿಯ ಹಿರಿಯ ಸಾಹಿತಿ ಜೆ.ಎಂ. ಮಠದ ಅವರನ್ನು ಮಂಗಳವಾರ ಸನ್ಮಾನಿಸಿ, ಅಧಿಕೃತ ಆಹ್ವಾನ ನೀಡಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಕನ್ನಡದ ಪರಿಚಾರಕರು ಹಾಗೂ ಹಿರಿಯ ಸಾಹಿತಿ ಆಗಿರುವ ಜೆ.ಎಂ. ಮಠದ ಅವರು 88 ವರ್ಷಗಳಾಗಿದ್ದರೂ ಈಗಲೂ ಸಹ ದಣಿವರಿಯದೇ ಶಾಲಾ ಕಾಲೇಜುಗಳಿಗೆ ತೆರಳಿ ಶಿಕ್ಷಕರು ಸಹಿತ ಮಕ್ಕಳಿಗೆ ಕನ್ನಡದ ಅರಿವು ಮೂಡಿಸುವುದು, ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮಕ್ಕಳು ಸೇರಿ ಪ್ರಯಾಣಿಕರಿಗೆ ಮೊಬೈಲ್ ಬಳಕೆ ಬಗೆಗೆ ಜಾಗೃತಿ ಮೂಡಿಸುವುದು ಸೇರಿ ಅನೇಕ ಸಾಮಾಜಿಕ ಕಾಳಜಿ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಆದ್ದರಿಂದ ಅವರನ್ನು ಗುರುತಿಸಿ ಈ ಬಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಏಕನಾಥ ಭಾನವಳ್ಳಿ, ಗೌರವ ಕಾರ್ಯಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಡಾ. ಬಸವರಾಜ ಕೇಲಗಾರ, ಸಂಚಾಲಕರಾದ ಡಾ. ಕೆ.ಎಚ್. ಮುಕ್ಕಣ್ಣನವರ, ವೀರೇಶ ಜಂಬಿಗಿ, ಜಿ.ಜಿ. ಹೊಟ್ಟಿಗೌಡ್ರ, ಬಿ.ಪಿ. ಶಿಡೇನೂರ, ಜಗದೀಶ ಮಳಿಮಠ, ಎ.ಬಿ. ರತ್ನಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net