ಟಾಂಗಾ ಕೂಟ ಬಯಲು ಜಾಗೆ ನಿಷೇಧಾಜ್ಞೆ ಸಡಿಲು

1PGEB_j5_400x400
Published on

ಹಾವೇರಿ: ರಾಣೆಬೆನ್ನೂರ ನಗರದ ಸಿಟಿಎಸ್ ನಂ.2050 ಟಾಂಗಾಕೂಟ ಬಯಲು ಜಾಗೆಯಲ್ಲಿ ಹೋಳಿ ಹಬ್ಬದ ಕಾಲಕ್ಕೆ ಕಾಮರತಿ ಪ್ರತಿಷ್ಠಾಪನೆ ಹಾಗೂ ಮೊಹರಂ ಹಬ್ಬದ ಆಲೆಗುಂಡಿ ತೆಗೆದು ಹಬ್ಬದ ಆಚರಣೆಗಾಗಿ ಮಾ. 26ರವೆರೆಗೆ ಕೆಲ ಷರತ್ತುಗಳನ್ನು ವಿಧಿಸಿ ನಿಷೇಧಾಜ್ಞೆಯನ್ನು ಸಡಿಸಲು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಈ ಸ್ಥಳದಲ್ಲಿ ಯಾವುದೇ ಕೋಮು ಪ್ರಚೋದನಾತ್ಮಕ ಸಂದೇಶ, ಚಟುವಟಿಕೆಗಳನ್ನು ಮಾಡುವಂತಿಲ್ಲ ಹಾಗೂ ಶಾಂತಿ ಕಾಪಾಡಿಕೊಳ್ಳಬೇಕು. ಪೊಲೀಸರು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಲೋಕಸಭಾ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net