ಬೆಟ್ಟಗೇರಿಯಲ್ಲಿ ಮನೆಗಳಿಗೆ ಮಂತ್ರಾಕ್ಷತೆ ವಿತರಣೆ

8.npk-1
Published on

ಮಡಿಕೇರಿ: ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಾಪೋಕ್ಲುವಿನ ಬೆಟ್ಟಗೇರಿಯಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ವಿತರಿಸಲಾಯಿತು.


ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯನ್ನು ಸೋಮವಾರ ಬರಮಾಡಿಕೊಂಡು ಬೆಟ್ಟಗೇರಿ ಶ್ರೀ ಭಗವತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಯಿತು. ಬಳಿಕ ಬೆಟ್ಟಗೇರಿ ಗ್ರಾಮದ ಹಿಂದು ಸಂಘಟನೆಯ ಪ್ರಮುಖರಿಗೆ ಮಂತ್ರಾಕ್ಷತೆ ಹಸ್ತಾಂತರಿಸಲಾಯಿತು. ನಂತರ ಸಂಘಟನೆಯ ಪ್ರಮುಖರು ಮನೆ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ವಿತರಿಸಿದರು.


ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗುವುದರಿಂದ ಭಕ್ತರು ತಮ್ಮ ಮನೆಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ರಾಮ ಭಜನೆ ಮಾಡುವಂತೆ ಮನವಿ ಮಾಡಿದರು. ಬೊಳ್ಳಿಯಂಡ ಮಂಜುನಾಥ್ ನೆಯ್ಯಣಿರ ಉಮೇಶ್, ಕಡ್ಲೇರ ತುಳಸಿ ಮೋಹನ್ , ವಿ.ಟಿ. ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net