ಮಂಜುನಾಥಪುರ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

CHAMARAJA-BJP-L.NAGENDRA- MLA
Published on

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿರುವ ಶಾಸಕ ಎಲ್.ನಾಗೇಂದ್ರ ಕ್ಷೇತ್ರದಲ್ಲಿ ನಿರಂತರವಾಗಿ ನಾನಾ ಅಭಿವೃದ್ಧಿ ಕಾಮಗಾರಿ ಕೆಲಸ ನಡೆಸುತ್ತಿರುವ ಜತೆಗೆ ಕ್ಷೇತ್ರದ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.


ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ಸರ್ಕಾರದ ಮಟ್ಟದಲ್ಲಿ ಅವಿರತವಾಗಿ ಶ್ರಮಿಸಿ ವಾರ್ಡ್ ಸಂಖ್ಯೆ 18ರ ವ್ಯಾಪ್ತಿಯ ಮಂಜುನಾಥಪುರದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಳೆದ 30-40 ವರ್ಷಗಳಿಂದ ಮಂಜುನಾಥಪುರ ಪ್ರದೇಶದಲ್ಲಿ ವಾಸವಾಗಿರುವ ಒಟ್ಟು 272 ನಿವಾಸಿಗಳಿಗೆ ಮಂಜುನಾಥಪುರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಕ್ಕುಪತ್ರವನ್ನು ವಿತರಿಸಿದರು.

ಪಾಲಿಕೆ ಸದಸ್ಯರಾದ ಬಿ.ವಿ. ರವೀಂದ್ರ, ಚಿಕ್ಕವೆಂಕಟು, ಸ್ಲಂ ಬೋರ್ಡ್‌ನ ಇಇ ಹರೀಶ್, ಜೆಇ ಝಾನ್ಸಿರಾಯ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ಬಿಜೆಪಿ ಸೋಮಶೇಖರ ರಾಜು, ಆಶ್ರಯ ಸಮಿತಿ ಸದಸ್ಯ ಮಹೇಶ್, ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಹರೀಶ್, ಮುಖಂಡರಾದ ಅನೂಜ್ ಸಾರಸ್ವತ, ನಂಜಪ್ಪ, ಶ್ರೀನಿವಾಸ್ ಗೌಡ, ಗೋವಿಂದ, ಗುರು, ರಮೇಶ್, ಕವಿತಾ, ನಾಗರತ್ನ, ಗಿರೀಶ್, ಮಂಜು, ರಾಮಸ್ವಾಮಿ, ಸುಬ್ರಮಣ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net