

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಮಾರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಎಲ್‌ಎಸ್‌ಇಜಿ ಮತ್ತು ಯೂತ್ ಫಾರ್ ಸೇವಾ ತಂಡದ ಪದಾಧಿಕಾರಿಗಳು ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್‌ನ ಸಹಯೋಗದಲ್ಲಿ ಎಂಟು ಲಕ್ಷ ರೂ. ಮೌಲ್ಯದ ಆರು ಕಂಪ್ಯೂಟರ್, ಟಿವಿ, ವಾಟರ್ ಫಿಲ್ಟರ್, ಕ್ರೀಡಾ ಸಾಮಗ್ರಿ, ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಗಾಡ್ರೇಜ್ ಬೀರುಗಳನ್ನು ಕೊಡುಗೆಯಾಗಿ ವಿತರಿಸಿದರು.
ಯೂತ್ ಫಾರ್ ಸೇವಾ ತಂಡದ ಮುಖ್ಯಸ್ಥ ಭಾಸ್ಕರ್ ಮಾತನಾಡಿ, ಕೊಟ್ಟಿರುವ ಸಾಮಗ್ರಿಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಎಲ್‌ಎಸ್‌ಇಜಿ ಎಂ.ಎಸ್.ಸರೋಜಮ್ಮ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರುವಂತೆ ಸಲಹೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಟಿ.ನಿಜಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸುಮಾ, ಸದಸ್ಯರಾದ ಎಚ್.ಪ್ರಭು, ಕೆ.ಶರಣಪ್ಪ, ಪಿಡಿಒ ಪ್ರಭು ನಾಯಕ್, ಎಸ್‌ಡಿಎಂಸಿ ಉಪಾಧ್ಯಕ್ಷೆ ರತ್ನಮ್ಮ, ಮಂಜುನಾಥ ಜಡೆ, ಮುಖ್ಯ ಶಿಕ್ಷಕ ಚಂದ್ರಶೇಖರ್, ಶಿಕ್ಷಕರಾದ ಉಮೇಶ್, ನಿಂಗರಾಜ್, ರವಿನಾಯ್ಕ, ಮಹೇಶಪ್ಪ ಬಂಡಿಬೈರನಹಳ್ಳಿ ಉಪಸ್ಥಿತರಿದ್ದರು.