ಸಂಪಾಜೆ ಶಾಲೆಗೆ ಬೆಂಚ್ ಡೆಸ್ಕ್ ವಿತರಣೆ

31.npk-1
ಸಂಪಾಜೆ ವಲಯದ ಸಂಪಾಜೆ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಭಿವೃದ್ಧಿ ಕಾರ್ಯದ ಅಡಿಯಲ್ಲಿ ಬೆಂಚ್ ಡೆಸ್ಕ್ ಗಳನ್ನು ವಿತರಣೆ ಮಾಡಲಾಯಿತು. ರಮಾದೇವಿ ಬಾಲಚಂದ್ರ ಕಳಗಿ, ಕವಿತಾ, ಶ್ರೀಧರ ಪಡ್ಪು ಸೇರಿದಂತೆ ಹಲವರು ಇದ್ದರು.
Published on

ನಾಪೋಕ್ಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಭಿವೃದ್ಧಿ ಕಾರ್ಯದ ಅಡಿಯಲ್ಲಿ ಸಂಪಾಜೆ ಶಾಲೆಗೆ ಬೆಂಚ್ ಡೆಸ್ಕ್ ಗಳನ್ನು ಗುರುವಾರ ವಿತರಣೆ ಮಾಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರ್ನಾಟಕ ರಾಜ್ಯದ ವಿವಿಧಡೆಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮ ರೂಪಿಸುತ್ತಿದೆ. ಅದರಲ್ಲಿ ಒಂದಾದ ಜ್ಞಾನದೀಪ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಕರ ಕೊರತೆ ಇರುವ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಗೌರವ ಶಿಕ್ಷಕರ ಒದಗಿಸುವುದು. ಶಾಲಾ ಕಟ್ಟಡ ನಿರ್ಮಾಣ, ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಪೂರೈಕೆ, ಕ್ರೀಡಾ ಹಾಗೂ ಬೋಧನಾ ಸಾಮಗ್ರಿ ಪೂರೈಕೆ ಮತ್ತು ಡೆಸ್ಕ್ ಬೆಂಚ್ ವಿತರಣೆ ಕಾರ್ಯಕ್ರಮವನ್ನ ಎಲ್ಲೆಡೆ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಮಡಿಕೇರಿ ತಾಲೂಕಿನ ಸಂಪಾಜೆ ವಲಯದ ಸಂಪಾಜೆ ಶಾಲೆಗೆ 10 ಬೆಂಚ್ ಹಾಗೂ ಡೆಸ್ಕ್ ಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮಾದೇವಿ ಬಾಲಚಂದ್ರ ಕಳಗಿ, ಶಾಲಾ ಮುಖ್ಯ ಶಿಕ್ಷಕಿ ಕವಿತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಶ್ರೀಧರ ಪಡ್ಪು, ಒಕ್ಕೂಟ ಅಧ್ಯಕ್ಷ ಲಕ್ಷ್ಮಣ, ಕಾರ್ಯದರ್ಶಿ ಅಶ್ವಿನಿ ಕೆ.ಟಿ. ವಲಯ ಮೇಲ್ವಿಚಾರಕ ಸಂತೋಷ್, ನಿಕಟ ಪೂರ್ವ ಒಕ್ಕೂಟ ಅಧ್ಯಕ್ಷ ಹೊನ್ನಪ್ಪ ಪಡ್ಪು, ಸೇವಾ ಪ್ರತಿನಿಧಿ ಪುಷ್ಪಾವತಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net