ಗಣೇಶ ಮೂರ್ತಿ ವಿಸರ್ಜನೆ ಸಂಪನ್ನ

HUN-SEP-24-1(GANESHA VISARJANE)
Published on

ಮೈಸೂರು: ಹುಣಸೂರು ನಗರದ ಸಾರ್ವಜನಿಕ ಶ್ರೀ ಪ್ರಸನ್ನ ವಿನಾಯಕ ಮಂಡಳಿ ವತಿಯಿಂದ ಮುನೇಶ್ವರ ಕಾವಲು ಮೈದಾನದಲ್ಲಿ ಗಣೇಶ ಚತುರ್ಥಿ ದಿನ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಶನಿವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು.

ಗಣೇಶ ಚತುರ್ಥಿಯಿಂದ ಆರಂಭಗೊಂಡು ಪ್ರತಿದಿನ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಗರದ ಶ್ರೀನಿಕೇತನ ಕಲಾ ಕೇಂದ್ರದ ವತಿಯಿಂದ ಭರತನಾಟ್ಯ, ಟ್ಯಾಲೆಂಟ್ ಶಾಲಾ ಮಕ್ಕಳಿಂದ ನೃತ್ಯ, ರವಿ ಮೆಲೊಡೀಸ್‌ನಿಂದ ಆರ್ಕೆಸ್ಟ್ರಾ, ಗಾನಯೋಗಿ ಪುಟ್ಟರಾಜ ಗವಾಯಿ ಸಂಗೀತ ಪಾಠಶಾಲೆ ಮಕ್ಕಳಿಂದ ಗೀತಗಾಯನ ಕಾರ್ಯಕ್ರಮಗಳು ಗಮನ ಸೆಳೆದವು.

ಪ್ರತಿಷ್ಠಾಪನೆ ದಿನ ಸೇರಿ 5 ದಿನಗಳ ಕಾರ್ಯಕ್ರಮಗಳು ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಅವರ ಪ್ರಾಯೋಜಕತ್ವದಲ್ಲಿ ನಡೆಯಿತು. ಕಡೆಯ ದಿನ ವಿವಿಧ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಮಾಜಿ ಶಾಸಕರಾದ ಎಚ್.ಪಿ.ಮಂಜುನಾಥ್ ಅವರು ವಿಸರ್ಜನಾ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು.

ಮುಖಂಡರಾದ ಎಚ್.ವೈ. ಕೃಷ್ಣ, ಪುಟ್ಟರಾಜು, ನಗರಸಭೆ ಸದಸ್ಯರಾದ ಸತೀಶ್ ಕುಮಾರ್, ವಿ.ಎನ್.ದಾಸ್, ಅಪ್ಪಿ, ಮುಜಾಹಿದ್‌ಪಾಶ, ಅಶೋಕ್, ಜೇಕೋಬ್, ಮಲ್ಲಿಕಾ, ಶಿವಾನಂದ, ಗೋಪಿ, ವೇಣು ಗೋಪಾಲ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net