

ಮುಂಬೈ: ಬಾಲಿವುಡ್ ನಟಿ ನಟಿ ದಿಶಾ ಪಟಾನಿ ಸದ್ಯ ಥೈಲ್ಯಾಂಡ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಬೀಚ್ ಕ್ಷಣಗಳ ಗ್ಲಿಂಪ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ.
ನಟಿ ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಈ ಚೆಲುವೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಕೆಲವು ಫೋಟೋಗಳು ಆನ್ಲೈನ್ ಬಿಸಿ ಹೆಚ್ಚಿಸಿದೆ. ದಿಶಾ ಪಟಾನಿ ಬಿಕಿನಿ ಧರಿಸಿ ಸಮುದ್ರ ಅಂಚಿನಲ್ಲಿ ಕುಳಿತು ಹಾಟ್ ಅವತಾರದಲ್ಲಿ ಪೋಸ್ ಕೊಟ್ಟಿದ್ದಾರೆ.
2016 ರಲ್ಲಿ ಎಂಎಸ್ ಧೋನಿಯ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದಿಶಾ ಪಟಾನಿ ನಂತರ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ತನಗಾಗಿ ವಿಶೇಷ ಮನ್ನಣೆ ಪಡೆದರು. ಭಾಗಿ, ಭಾರತ್ ಮತ್ತು ಮಲಂಗ್‌ನಂತಹ ಚಲನಚಿತ್ರಗಳೊಂದಿಗೆ ಅವರ ಕ್ರೇಜ್ ಅಪಾರವಾಗಿ ಹೆಚ್ಚಾಯಿತು.
ದಿಶಾ ಅವರು ಬಿಕಿನಿಗಳಿಂದಲೇ ಫೇಮಸ್. ಈ ನಟಿಯ ಫೋಟೋಗಳು ಹೆಚ್ಚಾಗಿ ಬಿಕಿನಿಯಲ್ಲಿಯೇ ಇವೆ. ಹಾಗಾಗಿಯೇ ಅವರಿಗೆ ಫಾಲೋವರ್ಸ್ ಕೂಡಾ ತುಂಬಾ ಹೆಚ್ಚಿದ್ದಾರೆ. ಲೋಫರ್ ಚಿತ್ರದ ಮೂಲಕ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾದ ದಿಶಾ ಪಟಾನಿ ಇಲ್ಲಿ ಪ್ರೇಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಂಡರು. ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುವ ಮೂಲಕ ತೆಲುಗು ಪ್ರೇಕ್ಷಕರ ಮನ ಕದ್ದಿದ್ದಾರೆ ಈ ಚೆಲುವೆ. ಇನ್ನು ತೆಲುಗು ಚಿತ್ರಗಳಲ್ಲಿ ಅವಕಾಶ ಪಡೆಯಲು ದಿಶಾ ಪ್ರಯತ್ನ ಪಡುತ್ತಿದ್ದಾರೆ.
ಪ್ರಭಾಸ್ ಅವರ ಮುಂಬರುವ ದೊಡ್ಡ ಚಲನಚಿತ್ರ ಪ್ರಾಜೆಕ್ಟ್ ಕೆ ಮೂವಿಯ ಭಾಗವಾಗಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೇಲೆ ದೇಶಾದ್ಯಂತ ಭಾರೀ ನಿರೀಕ್ಷೆಗಳಿವೆ.