ಯೋಗಾಭ್ಯಾಸದಿಂದ ರೋಗಮುಕ್ತ ಜೀವನ

yoga
ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ ವಸತಿ ಶಾಲೆಯಲ್ಲಿ ಆಯುಷ್ ಇಲಾಖೆ ಏರ್ಪಡಿಸಿದ್ದ ಯೋಗೋತ್ಸವದಲ್ಲಿ ಡಾ. ಎಂ.ಕೆ.ಮಹೇಶ್ ಮಾತನಾಡಿದರು. ಆಂಜನೇಯ, ಪುಟ್ಟನಾಯಕ ಇದ್ದರು.
Published on

ಸೊರಬ: ಇತ್ತೀಚೆಗೆ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಬೊಜ್ಜು, ಕೀಲು ನೋವು, ಖಿನ್ನತೆ ಹಾಗೂ ಥೈರಾಯ್ಡ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿವೆ ಎಂದು ಆಯುಷ್ ಇಲಾಖೆ ಹಿರಿಯ ವೈದ್ಯಾಧಿಕಾರಿ ಎಂ.ಕೆ.ಮಹೇಶ್ ಹೇಳಿದರು.

ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಯೋಗೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನಸಿಕ ಒತ್ತಡ ಹಾಗೂ ದೈಹಿಕ ಚಟುವಟಿಕೆ ಇಲ್ಲದಿರುವುದೇ ರೋಗ ಹೆಚ್ಚಳಕ್ಕೆ ಕಾರಣ. ಯೋಗ ಮಾಡುವುದರಿಂದ ಮಾನಸಿಕ, ದೈಹಿಕ ಸದೃಢತೆ ಹೊಂದಿ ರೋಗಮುಕ್ತ ಜೀವನ ನಡೆಸಬಹುದು. ವಿದ್ಯಾರ್ಥಿಗಳು ಏಕಾಗ್ರತೆ ವೃದ್ಧಿಗಾಗಿ ಯೋಗಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಆಯುಷ್ ಇಲಾಖೆಯಿಂದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರತಿನಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯೋಗ ತರಬೇತುದಾರ ರಾಜಶೇಖರ್ ವಿದ್ಯಾರ್ಥಿಗಳಿಗೆ ಯೋಗಾಸನದ ಬಗ್ಗೆ ಮಾಹಿತಿ ನೀಡಿದರು.
ಪ್ರಾಚಾರ್ಯ ಆಂಜನೇಯ, ಶಿಕ್ಷಕರಾದ ಪುಟ್ಟನಾಯಕ, ಜಯಕುಮಾರ್, ಆಶಾ, ಶುಶ್ರೂಷಕಿ ಅನ್ನಪೂರ್ಣ, ಸಿಬ್ಬಂದಿ ಪ್ರೇಮ್‌ಕುಮಾರ್, ದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net