ಅಭಿವೃದ್ಧಿ ನಿಗಮದ ಬಗ್ಗೆ ಸಿಎಂ ಜತೆ ಚರ್ಚೆ

devanga samaja
ಶಿವಮೊಗ್ಗದಲ್ಲಿ ದೇವಾಂಗ ಸಮಾಜದ ಸುವರ್ಣ ಮಹೋತ್ಸವದಲ್ಲಿ ಸ್ಮರಣ ಸಂಚಿಕೆವನ್ನು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.
Published on

ಶಿವಮೊಗ್ಗ: ದೇವಾಂಗ ಸಮಾಜದ ಅಭಿವೃದ್ಧಿ ನಿಗಮ ರಚಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತನಾಡುತ್ತೇನೆ. ಬರೀ ನಿಗಮ ರಚನೆ ಮಾಡಿದರೆ ಸಾಲದು. ಹಣಕಾಸು ಮೀಸಲಿಟ್ಟು ನಿಗಮ ರಚನೆ ಮಾಡಿಸುವ ಭರವಸೆಯನ್ನೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೀಡಿದರು.

ಕುವೆಂಪು ರಂಗಮಂದಿರದಲ್ಲಿ ಭಾನುವಾರ ಮಲೆನಾಡು ದೇವಾಂಗ ಸಮಾಜದ ದೇವರ ದಾಸಿಮಯ್ಯ ಸಭಾಭವನ ಮತ್ತು ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮಗೆ ಸಮಾಜ ಅಧಿಕಾರ ಕೊಟ್ಟಿದೆ. ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ. ನಮ್ಮ ಸಮಾಜವೆಂಬ ಭಾವನೆಯಿಂದ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದರು.

ನಾನು ಸಚಿವನಾಗಲು ದೇವಾಂಗ ಸಮಾಜದ ಕೊಡುಗೆ ದೊಡ್ಡದಿದೆ. ಅನ್ನ ಮತ್ತು ಜೀವನವನ್ನು ಈ ಸಮಾಜ ನನಗೆ ಕೊಟ್ಟಿದ್ದು ಸಮಾಜದ ಋಣ ತೀರಿಸುತ್ತೇನೆ ಎಂದರು. ಹಂಪಿ-ಹೇಮಕೂಟ ಗಾಯತ್ರಿ ಪೀಠದ ಪೀಠಾಧ್ಯಕ್ಷ ಶ್ರೀ ದಯಾನಂದಪುರಿ ಸ್ವಾಮೀಜಿ, ಧಾರವಾಡ ಜಿಲ್ಲೆ ಕವಲಗೇರಿ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಅರುಣ್ ವರಾಡೆ, ಕೆ.ಆರ್.ಶ್ರೀನಿವಾಸ್,ಡಾ. ಸಿ.ವಾಸುದೇವಪ್ಪ, ಬಿ.ಆರ್.ಯೋಗೀಶ್, ಅರೇಕಲ್ ಆರ್.ಪ್ರಕಾಶ್, ಯು.ರಾಮಪ್ಪ, ಕೆ.ಬಿ.ಭಾಸ್ಕರಯ್ಯ, ಟಿ.ರಾಜೇಶ್, ಕೆ.ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net