

ನವದೆಹಲಿ: ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಉದ್ಯಮಿಗಳೊಂದಿಗೆ ಸರಣಿ ವಿಚಾರವಿನಿಮಯ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ದೆಹಲಿಯ ತಮ್ಮ ಕಾರ್ಯಾಲಯದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿಜಯ ಸಂಕೇಶ್ವರ ಅವರೊಂದಿಗೆ ರ್ಚಚಿಸಿದರು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ದೇಶದ ಪ್ರಸ್ತುತ ಆರ್ಥಿಕ ಸನ್ನಿವೇಶ, ಕೈಗಾರಿಕಾ ರಂಗದ ಸ್ಥಿತಿಗತಿ ಮುಂತಾದ ಸಂಗತಿಗಳ ಕುರಿತು ಇಬ್ಬರೂ ಚರ್ಚೆ ನಡೆಸಿದರು. ಡಾ.ವಿಜಯ ಸಂಕೇಶ್ವರ ಅವರು ಈ ಸಂದರ್ಭದಲ್ಲಿ ಆರ್ಥಿಕತೆ, ಉದ್ಯಮ ವಿಷಯಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡು ಕೆಲ ಸಲಹೆಗಳನ್ನೂ ಮುಂದಿಟ್ಟರು. ಅಲ್ಲದೆ, ಒಟ್ಟಾರೆ ಉದ್ಯಮರಂಗದ ಹಿತದೃಷ್ಟಿಯಿಂದ ಕೆಲ ಮನವಿಗಳನ್ನೂ ಮಾಡಿಕೊಂಡರು. ಉದ್ಯಮದಲ್ಲಿ ದಶಕಗಳ ಅನುಭವವಿರುವ ಸಂಕೇಶ್ವರರ ಅಭಿಪ್ರಾಯಗಳಿಗೆ ಪ್ರಧಾನಿ ಮೋದಿಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.