ಗಣೇಶ ವಿಸರ್ಜನೆ: ಮಾರ್ಗ ಬದಲಾವಣೆ

ganesha
Published on

ಶಿವಮೊಗ್ಗ: ನಗರದಲ್ಲಿ ಸೆ.17ರಂದು ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಹಲವೆಡೆ ವಾಹನ ನಿಲುಗಡೆ ಹಾಗೂ ವಾಹನ ಸಂಚಾರ ಮಾರ್ಗವನ್ನು ಒಂದು ದಿನದ ಮಟ್ಟಿಗೆ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ಅಂದು ಬೆಳಗ್ಗೆ 11ರ ಸುಮಾರಿಗೆ ಕೋಟೆ ಭೀಮೇಶ್ವರ ದೇವಾಲಯದಿಂದ ಆರಂಭವಾಗುವ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆಯು ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಶಿವಪ್ಪನಾಯಕ ವೃತ್ತ, ಎಎ ವೃತ್ತ, ಸೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ ಮುಖ್ಯರಸ್ತೆ, ಜೈಲ್ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ಸರ್ಕಲ್, ಮಹಾವೀರ ಸರ್ಕಲ್, ಡಿವಿಎಸ್ ವೃತ್ತ, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ ಮೂಲಕ ಮೆರವಣಿಗೆ ಸಾಗಿ ಭೀಮೇಶ್ವರ ದೇವಾಲಯದ ಬಳಿ ತುಂಗಾ ನದಿಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.
ಬೆಂಗಳೂರು ಭದ್ರಾವತಿ, ಎನ್‌ಆರ್ ಪುರ ಕಡೆಯಿಂದ ಬರುವ ಮತ್ತು ಆ ಭಾಗಕ್ಕೆ ತೆರಳುವ ಎಲ್ಲ ಭಾರಿ ವಾಹನ, ಬಸ್, ಕಾರುಗಳು ಬೈಪಾಸ್ ರಸ್ತೆ ಮೂಲಕ ಶಿವಮೊಗ್ಗ ಬಸ್ ನಿಲ್ದಾಣ ತಲುಪಬಹುದು. ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ ಮತ್ತು ಆ ಭಾಗಕ್ಕೆ ತೆರಳುವ ಎಲ್ಲ ಭಾರಿ ವಾಹನ, ಬಸ್, ಕಾರುಗಳು ಎಂಆರ್‌ಎಸ್ ಸರ್ಕಲ್, ಬೈಪಾಸ್ ರಸ್ತೆ ಮಾರ್ಗದಲ್ಲಿ ಸಂಚರಿಸಬೇಕು.
ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳಿಗೆ ಹೊರತಾಗಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net