

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಕೊಲೆ ಆರೋಪರದಲ್ಲಿ ಅಂದರ್ ಆಗಿರುವ ಈಕೆ ದರ್ಶನ್ ಹಿಂದೆ ಬಿದ್ದಿದ್ದು ಯಾಕೆ ಅನ್ನೋ ವಿಚಾರವನ್ನ ನಿರ್ದೇಶಕಿ ಚಂದ್ರಕಲಾ ಮಾತನಾಡಿದ್ದಾರೆ.
ಪವಿತ್ರಾಳ ಪ್ರಾರಂಭಿಕ ದಿನಗಳನ್ನು ಕಣ್ಣಾರೆ ಕಂಡಿರುವ ಹಾಗೂ ಆಶಿಕಿ ಹೆಸರಿನ ಸಿನಿಮಾಗೆ ಆಯ್ಕೆ ಮಾಡಿದ್ದ ಸಿನಿಮಾ ನಿರ್ದೇಶಕಿ ಚಂದ್ರಕಲಾ ಮಾತನಾಡಿ, ಚಾನ್ಸ್‌ಗಾಗಿ ಅಲೆಯುತ್ತಿದ್ದ ಪವಿತ್ರಾಗೆ ಚಿತ್ರರಂಗದಲ್ಲಿ ಬೆಳೆಯೋ ಬಯಕೆ ಇರಲಿಲ್ಲ. ಎಲ್ಲ ಒಪ್ಪಿಕೊಂಡು ಆಮೇಲೆ ಏಕಾಏಕಿ ಕಿರಿಕ್ ತೆಗೆದಳು. ಅವಳು ಹಿಂದೆ ಸರಿದಿದ್ದೇ ನನಗೆ ಒಳ್ಳೆದಾಯ್ತು. ಪವಿತ್ರಾ ಮೊದ್ಲು ತಿಮ್ಮಿ ಥರಾ ಇದ್ಲು. ಈಗ ಬೇರೆ ಲೆವೆಲ್ಲಿಗೆ ಬೆಳೆದಿದ್ದಾಳೆ. ಅವಳು ಹೀರೋಯಿನ್ ಆಗಿ ಬೆಳಿಬೇಕು ಅಂತಾ ಬಂದವಳಲ್ಲ. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ ಅಂತ ಚಂದ್ರಕಲಾ ಹೇಳಿದ್ದಾರೆ.
ದರ್ಶನ್ಗೆ ಪಶ್ಚಾತ್ತಾಪ ಆಗಿರುತ್ತೆ. ಪವಿತ್ರಾಳಿಂದ ದೂರ ಉಳಿದುಕೊಳ್ತಾರೆ. ಪವಿತ್ರಾಗೆ ಬೇಕಿರೋದು ದರ್ಶನ್ ಮಾತ್ರ. ಅಲ್ಲದೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅದೇನ್ ಬಳಸ್ತಾರೋ ಅದೇ ಪವಿತ್ರಾಗೂ ಬೇಕಿತ್ತು. ಒಟ್ಟಾರೆ ಪವಿತ್ರಾ ಗೌಡಳ ನೈಜ ಮುಖವನ್ನ ಹಾಗೂ ಆಕೆಯ ಶೋಕಿ ಜೀವನದ ಖಯಾಲಿ ಬಗ್ಗೆ ಚಂದ್ರಕಲಾ ಹಲವು ವಿಚಾರ ಬಾಯ್ಬಿಟ್ಟಿದ್ದಾರೆ.
ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ತೀವ್ರವಾಗಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳ ಹತ್ತು ಹಲವು ವಿಚಾರಗಳು ಹೊರಬರ್ತಿವೆ.