

Shekhar Kapur: ಬಾಲಿವುಡ್ ನಿರ್ದೇಶಕ ಶೇಕರ್ ಕಪೂರ್ ತಮ್ಮ ನೆನಪಿನ ಹಾದಿಯನ್ನು ಒಮ್ಮೆ ನೆನಪಿಸಿಕೊಂಡಿದ್ದು, ಮಿಸ್ಟರ್ ಇಂಡಿಯಾ ಎಂಬ ಕ್ಲಾಸಿಕ್ ಚಿತ್ರದಲ್ಲಿ ದಿವಂಗತ ಶ್ರೀ ದೇವಿಯೊಂದಿಗೆ ಚಿತ್ರೀಕರಣದ ಮೊದಲ ದಿನ ತೆಗೆದಂತಹ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾನುವಾರ ಪೋಸ್ಟ್ ಹಂಚಿಕೊಂಡಿದ್ದಾರೆ.
ಶ್ರೀ ದೇವಿ ಜೊತೆ ಇದು ನನ್ನ ಮೊದಲ ದಿನದ ಚಿತ್ರೀಕರಣ. ನಾವು ಮಹಾಬಲೇಶ್ವರದಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡುತ್ತಿದ್ದೆವು. ಅವಳು ನೃತ್ಯ ಮಾಡುವಾಗ ನಮ್ಮೆಲ್ಲರಿಗೂ ಜಗತ್ತು ನಿಂತೇ ಹೋಯಿತೆಂದು ಭಾಸವಾಯಿತು. ಹಾಗೇ ಈ ಸಮಯದಲ್ಲಿ ಸೆಟ್ನಲ್ಲಿದ್ದ ನಾವೆಲ್ಲರೂ ಮೂಕವಿಸ್ಮಿತರಾಗಿದ್ದೆವು. ಈಕೆ ನೃತ್ಯ ಮಾಡುವಾಗ ನಾನು ಕಟ್ ಹೇಳಲು ಸಹ ಮರೆತಿದ್ದೆ ಎಂದು ಹೇಳಿದ್ದಾರೆ.
ಶ್ರೀದೇವಿ ಬಗ್ಗೆ ಮಾತನಾಡದ ಇತರ ವಿಷಯಗಳಿದ್ದವು, ಅವರು ತುಂಬಾ ನಿಷ್ಟಾವಂತೆಯಾಗಿದ್ದರು ಹಾಗೆಯೇ ಚಿತ್ರ ತೊಂದರೆಗೆ ಸಿಲುಕಿದಾಗ ಅವರು ನನ್ನನ್ನು ರಕ್ಷಿಸಲು ಯಾವುದೇ ಅವಕಾಶವನ್ನು ತೆಗೆದುಕೊಳ್ಳುತ್ತಿದ್ದರು. ಇನ್ನು ಅವರು ತಮ್ಮ ನಿರ್ದೇಶಕರನ್ನು ಕಾಪಾಡುವ ಜವಬ್ದಾರಿಯನ್ನು ಸ್ವತಃ ಅವರೇ ತೆಗೆದುಕೊಂಡಿದ್ದರು. ಅಂದಹಾಗೇ, ಅವಳು ತನ್ನ ಪ್ರತಿಭೆಯನ್ನು ಪ್ರದರ್ಶನ ನೀಡಲು ಮಾತ್ರವಲ್ಲದೆ, ತನ್ನ ಮುಗ್ದತೆ ಹಾಗೂ ದುರ್ಬಲತೆಯನ್ನು ತರುತ್ತಿದ್ದಳು. ಅವಳು ತನ್ನ ಆಂತರಿಕ ಭಾವನೆಗಳನ್ನು ವ್ಯಕ್ತಪಡಿಸುವ ಏಕೈಕ ಕ್ಯಾಮರಾ ಇದ್ದಂತೆ. 2018ರಲ್ಲಿ 54 ನೇ ವಯಸ್ಸಿನಲ್ಲಿ ನಿಧನರಾದ ಶ್ರೀದೇವಿ ಕ್ಯಾಮರಾ ಮುಂದೆ ತಮ್ಮ ಆಂತರಿಕ ವ್ಯಕ್ತಿತ್ವವನ್ನು ಪ್ರತಿನಿಧಿಸಲು ಎಂದಿಗೂ ಹೆದರುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರವು 1987 ರ ಎರಡನೇ ಅತೀ ಹೆಚ್ಚು ವಾನಿಜ್ಯಕವಾಗಿ ಯಶಸ್ವಿಯಾದ ಚಿತ್ರವಾಯಿತು. ಇದು ವಿಶ್ವಾದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 100 ಮಿಲಿಯನ್ ರೂ.ಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ಆಗಿ ಹೊರ ಬಂದಿತ್ತು.(ಏಜೆನ್ಸೀಸ್)