ನಿರ್ದೇಶಕ ರಾಜಮೌಳಿ ಹಾಲಿವುಡ್​ಗೆ ಹಾರೋದು ಫಿಕ್ಸ್!

Rajamouli
Published on

‘ಆರ್​ಆರ್​ಆರ್’ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ನಿರ್ದೇಶಕ ರಾಜಮೌಳಿ ವಿದೇಶಗಳಲ್ಲಿ ಚಿತ್ರದ ಬಿಡುಗಡೆಗೆ ಓಡಾಡುತ್ತಿದ್ದಾರೆ. ಅಮೆರಿಕಾದಲ್ಲು ಹಲವೆಡೆ ಸ್ಕ್ರೀನಿಂಗ್ ಆಗುತ್ತಿದ್ದು, ರಾಜಮೌಳಿ ಅತಿಥಿಯಾಗಿ ಪ್ರೇಕ್ಷಕರ ಜತೆ ಸಂವಾದ ನಡೆಸುತ್ತಿದ್ದಾರೆ. ಈ ಓಡಾಟದ ನಡುವೆಯೇ ರಾಜಮೌಳಿಯವರ ಮುಂದಿನ ಚಿತ್ರದ ಬಗ್ಗೆ ಹಲವಾರು ಅಂತೆ, ಕಂತೆಗಳು ಕೇಳಿಬರುತ್ತಿವೆ. ಅವರು ಹಾಲಿವುಡ್ ಏಜೆನ್ಸಿ ಜತೆ ಒಪ್ಪಂದ ಮಾಡಿಕೊಂಡು, ಇಂಗ್ಲೀಷ್ ಸ್ಟಾರ್​ಗಳನ್ನು ಭಾರತೀಯ ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುತ್ತಿದ್ದಾರೆ. ಹಾಲಿವುಡ್ ಚಿತ್ರವನ್ನೇ ನಿರ್ದೇಶಿಸಲಿದ್ದಾರೆ, ‘ಅವೆಂಜರ್ಸ್’ ನಿರ್ವಪಕ ಕೆವಿನ್ ಫೀಜ್ ಜತೆ ಸಿನಿಮಾ ಮಾಡೋದು ಫಿಕ್ಸ್ ಅಂತೆಲ್ಲ ಸುದ್ದಿಗಳು ಹಬ್ಬಿದ್ದವು.

ಇತ್ತೀಚೆಗಷ್ಟೆ ಅಮೆರಿಕದಲ್ಲಿ ‘ಆರ್​ಆರ್​ಆರ್’ ವಿಶೇಷ ಪ್ರದರ್ಶನದ ಬಳಿಕ ಮಾತನಾಡಿರುವ ರಾಜಮೌಳಿ, ‘ಹಾಲಿವುಡ್​ನಲ್ಲಿ ಕೆಲಸ ಮಾಡಲು ಕೆಲವು ಅವಕಾಶಗಳು ಬರುತ್ತಿವೆ. ಆದರೆ ಸದ್ಯ ನಾನು ಮಹೇಶ್ ಬಾಬು ಜತೆ ಸಿನಿಮಾ ಮಾಡಲು ಕಮಿಟ್ ಆಗಿದ್ದೇನೆ. ಅವರು ತೆಲುಗಿನ ದೊಡ್ಡ ಸ್ಟಾರ್. ಅವರ ಜತೆಗಿನ ಸಿನಿಮಾ ಪೂರ್ಣಗೊಂಡ ಬಳಿಕ ಮುಂದೇನು ಎಂದು ಯೋಚನೆ ಮಾಡಲಿದ್ದೇನೆ. ಆದರೆ, ಹಾಲಿವುಡ್​ನಿಂದ ಸಾಕಷ್ಟು ಕಲಿಯುವುದಿದೆ. ಅವರ ಸಿನಿಮಾ ನಿರ್ವಣದ ಪ್ರಕ್ರಿಯೆ, ವಿಧಾನಗಳನ್ನು ಕಲಿಯಲು ಉತ್ಸುಕನಾಗಿದ್ದೇನೆ. ಹಾಲಿವುಡ್​ನವರ ಜತೆ ಸೇರಿ ಇನ್ನೂ ಉತ್ತಮ ಗುಣಮಟ್ಟದ ಸಿನಿಮಾ ಅನುಭವವನ್ನು ಪ್ರೇಕ್ಷಕರಿಗೆ ನೀಡುವ ಬಗ್ಗೆಯೂ ಯೋಚಿಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net