ಋಷಿ ಕುಮಾರ ಸ್ವಾಮೀಜಿಗೆ ಮಠ ಸಿನಿಮಾ ನಿರ್ದೇಶಕ ತಿರುಗೇಟು ನೀಡಿದ್ದು ಹೀಗೆ…

New Project (10)
Published on

ಬೆಂಗಳೂರು: ರವೀಂದ್ರ ವೆಂಶಿ ನಿರ್ದೇಶಿಸಿರುವ 'ಮಠ' ಚಿತ್ರದ ವಿವಾದ ಉಲ್ಬಣಗೊಂಡಿದೆ. ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿ ಮಾಡಿರುವ ಆರೋಪಗಳಿಗೆ ರವೀಂದ್ರ ವಂಶಿ ಇಂದು ತಿರುಗೇಟು ನೀಡಿದ್ದಾರೆ.

"ಸಿನಿಮಾವನ್ನು ತುಂಬ ಸೂಕ್ಷ್ಮವಾಗಿ ಮಾಡಿದ್ದೇವೆ. 149 ದಿನಗಳ ಕಾಲ, 70ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೂಟ್ ಮಾಡಿದ್ದೇವೆ. ಮೊದಲು ಸಿನಿಮಾ ನೋಡಿ ಮಾತನಾಡಿ. ಸಾಕಷ್ಟು ಅಧ್ಯಯನ ಮಾಡಿಯೇ ಸಿನಿಮಾ ತಯಾರಿಸಿದ್ದೇವೆ. ಎಲ್ಲಾ ಧರ್ಮ, ಪರಂಪರೆಗಳ ಬಗ್ಗೆ ನಮಗೆ ಗೌರವವಿದೆ" ಎಂದು ರವೀಂದ್ರ ವಂಶಿ ಹೇಳಿದ್ದಾರೆ.

ಚಿತ್ರದ ಟ್ರೇಲರ್ ಸಂಭಾಷಣೆ, ಕಥೆಯ ಬಗ್ಗೆ ಋಷಿ ಕುಮಾರ ಸ್ವಾಮೀಜಿ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದೂ ಮಠಗಳ ಬಗ್ಗೆ ಸಿನಿಮಾದಲ್ಲಿ ಕೀಳಾಗಿ ತೋರಿಸಿದ್ದಾರೆಂದು ಚಿತ್ರತಂಡದ ವಿರುದ್ಧ ಋಷಿ ಕುಮಾರಸ್ವಾಮಿ ಆರೋಪಿಸಿದ್ದಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಹ ಕೊಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರವೀಂದ್ರ ವಂಶಿ, "ನನ್ನ ಸಿನಿಮಾಗೆ ಚೀಪ್ ಪಬ್ಲಿಸಿಟಿ ಅಗತ್ಯವಿಲ್ಲ. ನನ್ನ ಮಠ ಚಿತ್ರಕ್ಕೆ ಸುಳ್ಳು ಪ್ರಚಾರ ಬೇಕಿಲ್ಲ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net