ಫೆ.8ರಂದು ನಗರದಲ್ಲಿ ನೇರ ಸಂದರ್ಶನ: ಎಸ್‌ಎಸ್‌ಎಲ್ಸಿ, ಪಿಯುಸಿ ವ್ಯಾಸಂಗ ಮಾಡಿದವರಿಗೂ ಅವಕಾಶ

job-fair-feaured.png
Published on

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಎವರಿಡೇ ಇಂಡಸ್ಟ್ರೀಸ್, ಕ್ರೆಡಿಟ್ ಆಕ್ಸಿಸ್ ಗ್ರಾಮೀಣ, ಎಸ್.ವಿ. ರೆಕ್ರೂಟ್, ಸ್ಪಂದನಾ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಫ್ಯೂಷನ್ ಮೈಕ್ರೋ ಫೈನಾನ್ಸ್ ಉದ್ಯೋಗ ವಾಹಿನಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಫೆ.8ರಂದು ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮೊ ಹಾಗೂ ಯಾವುದೇ ಪದವಿ, ಬಿಇ, ಎಂಎಸ್‌ಸಿ, ಬಿಇಡಿ, ಎಂಬಿಎ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಅಂದು ಬೆಳಗ್ಗೆ 10.30ಕ್ಕೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಮಾಹಿತಿಗೆ ದೂ.ಸಂ 08232-295124 ಅಥವಾ ಮೊ.ಸಂ 8660061488 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net