

Dinner Meeting: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾವೇರಿ ನಿವಾಸದಲ್ಲಿ ಇಂದು(ಅ. 13) ರಾತ್ರಿ ಡಿನ್ನರ್ ಸಭೆ ಕರೆದಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯ ಸಚಿವ ಸಂಪುಟ ಪುನರ್ ರಚನೆಯೂ, ಇಲ್ಲ ಸಿಎಂ ಬದಲಾವಣೆಯೋ ಎಂಬ ಚರ್ಚೆ ಹುಟ್ಟು ಹಾಕಿದೆ.
ಸಿಎಂ ಕಾವೇರಿ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಚೆಲುವರಾಯಸ್ವಾಮಿ, ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಬೈರತಿ ಸುರೇಶ್, ಡಿ.ಸುಧಾಕರ್, ಎಂ.ಸಿ.ಸುಧಾಕರ್, ಕೆ.ಜೆ.ಜಾರ್ಜ್, ಕೆ.ವೆಂಕಟೇಶ್, ರಹೀಂಖಾನ್, ಶಿವಾನಂದಪಾಟೀಲ್
ಶರಣಬಸಪ್ಪ ದರ್ಶನಾಪೂರ, ಶರಣಪ್ರಕಾಶ್ ಪಾಟೀಲ್, ಆರ್.ಬಿ.ತಿಮ್ಮಾಪೂರ ಸೇರಿ ಇನ್ನು ಹಲವು ಸಚಿವರು ಆಗಮಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷದ ಕಳೆದ ಹಿನ್ನೆಲೆ ಸಚಿವ ಸಂಪುಟ ಪುನರ್ ರಚನೆ ಆಗುವ ಬಗ್ಗೆಯೂ ವದಂತಿಗಳು ಹಬ್ಬಿದ್ದು, ಸಚಿವರ ಬದಲಾವಣೆ ಬಗ್ಗೆ ಊಹಾಪೋಹಗಳು ಎದ್ದಿವೆ. ಆದರೆ ಕೆಲವು ಸಚಿವ ಡಿನ್ನರ್ ಸಭೆಯನ್ನು ಸಾಮಾನ್ಯ ಎಂದು ಹೇಳಿದ್ದಾರೆ.
ಇಂದು ಮಧ್ಯಾಹ್ನ ಬಾಗಲಕೋಟೆಯಲ್ಲಿ ಮಾತನಾಡಿದ್ದ ಸಿಎಂ, ಸಂಜೆ ನಡೆಯುವ ಡಿನ್ನರ್ ಪಾರ್ಟಿಗೂ, ಸಚಿವ ಸಂಪುಟ ಪುನರ್ರಚನೆಗೂ ಯಾವುದೇ ಸಂಬಂಧವಿಲ್ಲ. ನಾನು ಆಗಾಗ ಡಿನ್ನರ್ ಪಾರ್ಟಿ ನೀಡುತ್ತಿರುತ್ತೇನೆ. ಊಟದಲ್ಲಿ ಏನೂ ಸ್ಪೇಷಲ್ ಇಲ್ಲ. ತಮಗೆ(ಮಾಧ್ಯಮಗಳು) ಮತ್ತು ಬಿಜೆಪಿಯವರಿಗೆ ಅದು ಸ್ಪೇಷಲ್ ಎಂದು ಸಿಎಂ ತಮಾಷೆ ಮಾಡಿದ್ದರು.