ಬೆಂಗಳೂರು: ಸಚಿವರೊಬ್ಬರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ಪಟ್ಟಂತೆ ದೂರು ದಾಖಲಿಸಿದ್ದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಇದೀಗ ದೂರನ್ನು ವಾಪಸ್ ಪಡೆದಿದ್ದಾರೆ. ಅಷ್ಟಕ್ಕೂ ಅವರು ದೂರು ವಾಪಸ್ ಪಡೆದಿರುವುದಕ್ಕೆ ಕಾರಣವೇನು? ಆ ಪ್ರಶ್ನೆಗೆ ಅವರೇ ಪತ್ರದ ಮೂಲಕ ಉತ್ತರ ನೀಡಿದ್ದಾರೆ.
ದಿನೇಶ್ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಸರ್ಕಲ್ ಇನ್ಸ್ಪೆಕ್ಟರ್ಗೆ ದೂರು ವಾಪಾಸು ಪಡೆಯುವ ಕುರಿತಾಗಿ ಪತ್ರ ಬರೆದಿದ್ದಾರೆ. ಬಟ್ಟೆ ಮುಳ್ಳ ಮೇಲೆ ಬಿದ್ದರೂ, ಮುಳ್ಳು ಬಟ್ಟೆ ಮೇಲೆ ಬಿದ್ದರೂ ಹರಿಯುವುದು ಬಟ್ಟೆ ಮಾತ್ರ. ಅದೇ ರೀತಿ ಈ ಪ್ರಕರಣದಲ್ಲಿ ಆಗಿದೆ. ನನ್ನನ್ನು ಸಾಮಾಜಿಕ ಕಾರ್ಯಕರ್ತನಾಗಿ ಬಲ್ಲವರೊಬ್ಬರು ನನಗೆ ಈ ಸಿಡಿ ಕಳುಹಿಸಿಕೊಟ್ಟು, ಒಂದು ವೇಳೆ ಇಲ್ಲಿ ಲೈಂಗಿಕ ದೌರ್ಜನ್ಯವಾಗಿದ್ದರೆ ನ್ಯಾಯ ಕೊಡಿಸಿ ಎಂದು ಕೇಳಿದ್ದರು. ಅದರಂತೆ ನಾನು ಅದನ್ನು ಎಲ್ಲಿಯೂ ಬಹಿರಂಗ ಪಡಿಸದೆ ನೇರವಾಗಿ ಕಮಿಷನರ್ ಕಚೇರಿಗೆ ಕಳುಹಿಸಿದ್ದೆ. ಕಬ್ಬನ್ ಪಾರ್ಕ್ ಪೊಲೀಸರಿಗೂ ಕಳುಹಿಸಿದ್ದೆ. ಒಂದು ವೇಳೆ ಇಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯವಾಗಿದ್ದರೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದಷ್ಟೇ ದೂರು ಕೊಟ್ಟಿದ್ದು. ಆದರೆ ಅದಕ್ಕೆ ಬೇರೆಯದ್ದೇ ರೂಪ ಕೊಡಲಾಯಿತು. shoot the messenger ಎನ್ನುವ ನೀತಿ ಪಾಲನೆಯಾಯಿತು.
ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯ ಬಗ್ಗೆ ತೀರಾ ಕೆಟ್ಟದಾಗಿ ಬಿಂಬಿಸಲಾಯಿತು. ಆಕೆ ದೇಶಕ್ಕೇ ಕಂಟಕ ಎನ್ನುವ ಹೇಳಿಕೆಯನ್ನು ನೀಡಲಾಯಿತು. ಜಾತಿ ಸಂಘಟನೆಗಳು ಹಲವಾರು ರೀತಿಯಲ್ಲಿ ವ್ಯಾಖ್ಯಾನ ಮಾಡಿದವು. ನಾನು ದೂರು ನೀಡಿದ ಉದ್ದೇಶವೇ ಮಹಿಳೆಗೆ ಮತ್ತು ಮಾಹಿತಿದಾರನಾದ ನನಗೆ ತಿರುಗಬಾಣದಂತಾಗಿದೆ. ಮಹಿಳೆ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ನಾನು ಈ ದೂರನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.