ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಮಿತ್ರರಿಂದ ಆರ್ಥಿಕ ನೆರವು

Nitya Bhavisya Vijayavani
Published on

ಮೇಷ: ಪ್ರಯಾಣಕ್ಕಾಗಿ ಅಧಿಕ ಖರ್ಚು ಮಾಡಬೇಕಾಗುವುದು. ಕುಟುಂಬದಲ್ಲಿ ವಾಗ್ವಾದ ನಡೆಯುವುದು. ಸಾಲದ ಚಿಂತೆ ಬೇಡ. ಶುಭಸಂಖ್ಯೆ: 5

ವೃಷಭ: ವಿವಾದಕ್ಕೆ ಸಿಲುಕಿ ಹಾಕಿಕೊಳ್ಳಬೇಡಿ. ಆರ್ಥಿಕವಾಗಿ ಅನುಕೂಲ. ಕಚೇರಿಯಲ್ಲಿ ಸಹೋದ್ಯೋಗಿ ಗಳೊಂದಿಗೆ ಕಲಹ ಸಾಧ್ಯತೆ. ಶುಭಸಂಖ್ಯೆ: 7

ಮಿಥುನ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಫಲ. ಉದ್ಯೋಗ ಬದಲಾವಣೆಗೆ ಮನಸ್ಸು. ಹೆಣ್ಣು ಮಕ್ಕಳಿಂದ ಅನುಕೂಲ ಒದಗಿ ಬರುವುದು. ಶುಭಸಂಖ್ಯೆ: 9

ಕಟಕ: ಪ್ರಯಾಣದ ಆಲೋಚನೆ. ಮಿತ್ರರೊಡನೆ ಮನಸ್ತಾಪ. ಪಾಲುದಾರಿಕೆ ಹೂಡಿಕೆಯಲ್ಲಿ ಲಾಭ. ವಿಚ್ಛೇದನ ವಿಚಾರವಾಗಿ ನೋವು. ಶುಭಸಂಖ್ಯೆ: 5

ಸಿಂಹ: ಮಾನಸಿಕವಾಗಿ ವೇದನೆ. ಉದ್ಯೋಗದಲ್ಲಿ ಒತ್ತಡ. ಆಕಸ್ಮಿಕ ಧನ ನಷ್ಟ. ಮಿತ್ರರಿಂದ ಆರ್ಥಿಕ ನೆರವು. ಉದ್ಯೋಗದ ಭರವಸೆ. ಶುಭಸಂಖ್ಯೆ: 9

ಕನ್ಯಾ: ಶುಭ ಕಾರ್ಯಗಳಿಗೆ ಅನುಕೂಲಕರ ದಿನ. ಹಳೆ ಸ್ನೇಹಿತರ ಸಂಪರ್ಕ. ದಾಯಾದಿ ಕಲಹದಿಂದ ಕೋರ್ಟು ಮೆಟ್ಟಿಲೇರುವ ಸಂಭವ. ಶುಭಸಂಖ್ಯೆ: 4

ತುಲಾ: ಉದ್ಯೋಗ ಕಳೆದುಕೊಳ್ಳುವ ಭೀತಿ. ತಂದೆಯ ಆರೋಗ್ಯ ವ್ಯತ್ಯಾಸ. ಫ್ಯಾನ್ಸಿ ಸ್ಟೋರ್​ನವರಿಗೆ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 2

ವೃಶ್ಚಿಕ: ವಿಚ್ಛೇದಿತರಿಗೆ ವಿವಾಹ ಯೋಗ. ಮಕ್ಕಳಿಂದ ಸಮಾಜದಲ್ಲಿ ಗೌರವ. ಆರ್ಥಿಕ ಸಂಕಷ್ಟಕ್ಕೆ ಮುಕ್ತಿ ದೊರೆತು ಕಷ್ಟ ಪರಿಹಾರ. ಶುಭಸಂಖ್ಯೆ:1

ಧನಸ್ಸು: ಉನ್ನತ ಶಿಕ್ಷಣದಲ್ಲಿ ಹಿನ್ನಡೆ, ಬೇಸರ. ಸ್ಥಿರಾಸ್ತಿಯಿಂದ ಸಂಕಷ್ಟ. ಪಾಲುದಾರಿಕೆಯಲ್ಲಿಯೂ ನಷ್ಟ. ಧೈರ್ಯ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 4

ಮಕರ: ಶುಭಕಾರ್ಯದ ಸಂಭ್ರಮ. ಸ್ವಯಂಕೃತ ಅಪರಾಧದಿಂದ ಸಮಸ್ಯೆ. ಮಕ್ಕಳ ಭವಿಷ್ಯದ ಚಿಂತೆ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ:7

ಕುಂಭ: ಜೇನು ವ್ಯಾಪಾರದಲ್ಲಿ ಲಾಭ. ಸಾಲಗಾರರೊಂದಿಗೆ ವಾಗ್ವಾದ. ಪ್ರೇಮ ವಿಚಾರದಲ್ಲಿ ಸಂಕಷ್ಟ. ಉದ್ವೇಗ. ಆತುರದಿಂದ ತೊಂದರೆ. ಶುಭಸಂಖ್ಯೆ:3

ಮೀನ: ಬಂಧು ಬಾಂಧವರೊಂದಿಗೆ ಉತ್ತಮ ಸಂಬಂಧ. ಗುರುಗಳಿಂದ ಪ್ರಶಂಸೆ. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಲಾಭವಾಗುವುದು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net