ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಿವಾಹಕ್ಕೆ ಯೋಗ ಕೂಡಿ ಬರಲಿದೆ

Nitya Bhavisya Vijayavani
Published on

ಮೇಷ: ರಕ್ಷಣಾ ಇಲಾಖೆಯವರಿಗೆ ಬಡ್ತಿ. ಸೇವಾ ಕ್ಷೇತ್ರದವರಿಗೆ ಉನ್ನತ ಸ್ಥಾನಮಾನ ಸಿಗಲಿದೆ. ಹಣಕಾಸಿನ ಸಂಸ್ಥೆಯವರಿಗೆ ಲಾಭ. ಶುಭಸಂಖ್ಯೆ: 3

ವೃಷಭ: ರೇಷ್ಮೆ ನೇಕಾರರಿಗೆ ಉತ್ತಮ ಬೇಡಿಕೆ ಬಂದು ಸಂತಸ. ರಾಜಕೀಯ ಪ್ರವೇಶಿಸಲು ಸಕಾಲ. ಕಲಾವಿದರಿಗೆ ಆತ್ಮವಿಶ್ವಾಸ ಹೆಚ್ಚಲಿದೆ. ಶುಭಸಂಖ್ಯೆ:1

ಮಿಥುನ: ಆಮದು ರಫ್ತಿನ ವ್ಯಾಪಾರದಲ್ಲಿ ಲಾಭವಾಗಲಿದೆ. ಪಾರಂಪರಿಕ ವೃತ್ತಿಯತ್ತ ಗಮನ ಕೊಡಿ. ವಿವಾಹಕ್ಕೆ ಯೋಗ ಕೂಡಿ ಬರಲಿದೆ. ಶುಭಸಂಖ್ಯೆ: 5

ಕಟಕ: ವಿವಾಹ ಯತ್ನದಲ್ಲಿ ಯಶಸ್ಸು. ಲೋಹದ ವಸ್ತುಗಳಿಂದ ಎಚ್ಚರ. ಲೇವಾದೇವಿ ವ್ಯವಹಾರದಿಂದ ಆರ್ಥಿಕ ಸಮಸ್ಯೆ ತೀರಲಿದೆ. ಶುಭಸಂಖ್ಯೆ: 7

ಸಿಂಹ: ಸ್ತ್ರೀಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ. ಕಮಿಷನ್ ವ್ಯವಹಾರದಿಂದ ಹೆಚ್ಚು ಆದಾಯ. ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ. ಶುಭಸಂಖ್ಯೆ: 3

ಕನ್ಯಾ: ಸ್ಟಾಕ್ ಷೇರಿನ ವ್ಯವಹಾರದಲ್ಲಿ ಲಾಭ. ತಾಂತ್ರಿಕ ಪರಿಣಿತರಿಗೆ ವಿಶೇಷ ಉದ್ಯೋಗ ಸಿಗಲಿದೆ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 6

ತುಲಾ: ಶಿಕ್ಷಕ ವೃತ್ತಿಯವರಿಗೆ, ಲೇಖಕರಿಗೆ ಸನ್ಮಾನ. ಸಮುದ್ರದ ಉತ್ಪನ್ನ ಮಾರಾಟದಲ್ಲಿ ಉತ್ತಮ ಲಾಭ. ಇಷ್ಟ ದೇವರ ಪ್ರಾರ್ಥನೆ ಮಾಡಿ. ಶುಭಸಂಖ್ಯೆ: 9

ವೃಶ್ಚಿಕ: ಕೌನ್ಸಲಿಂಗ್ ವೃತ್ತಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಆದಾಯ. ಸಹನೆ ಇದ್ದಷ್ಟು ಜಯ ದೊರೆಯುವುದು. ವಕೀಲ ವೃತ್ತಿಯಲ್ಲಿ ಕೀರ್ತಿ. ಶುಭಸಂಖ್ಯೆ: 3

ಧನಸ್ಸು: ಪೂಜಾ ಸಾಮಗ್ರಿ ವ್ಯಾಪಾರದಲ್ಲಿ ಲಾಭ. ಕುಟುಂಬಶಾಂತಿ ಇರುವುದು. ಕಚೇರಿಯ ಒತ್ತಡದ ವಾತಾವರಣ ನಿಭಾಯಿಸುವಿರಿ. ಶುಭಸಂಖ್ಯೆ:8

ಮಕರ: ಮನೋವೈದ್ಯರಿಗೆ ವಿದೇಶ ಪ್ರಯಾಣ. ಪುಸ್ತಕ ವ್ಯಾಪಾರದಲ್ಲಿ ಲಾಭ. ಕಿರುಚಿತ್ರ ನಿರ್ದೇಶಕರಿಗೆ ಲಾಭ. ದತ್ತಾತ್ರೇಯರನ್ನು ಆರಾಧಿಸಿ. ಶುಭಸಂಖ್ಯೆ: 4

ಕುಂಭ: ಕೃಷಿಕರಿಗೆ ಬೆಳೆ ಮಾರಾಟದಲ್ಲಿ ಲಾಭ. ಮಗಳಿಗೆ ವಿವಾಹಯೋಗ. ವೈದ್ಯರ ಸಲಹೆ ಪಾಲಿಸಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ: 4

ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ಪ್ರಾಪ್ತಿಯಾಗು ವುದು. ಮಹಿಳಾ ಉದ್ಯಮಿಗಳಿಗೆ ಶುಭದಿನ. ಜೇನು ಕೃಷಿಯಲ್ಲಿ ಲಾಭ ಬರಲಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net