

ಮೇಷ: ಸಿದ್ಧಉಡುಪು ಮಾರಾಟದಲ್ಲಿ ಹೆಚ್ಚು ಆದಾಯ. ಸಂಗಾತಿ ಜೊತೆ ಉತ್ತಮ ಬಾಂಧವ್ಯ. ಆಹಾರ ಧಾನ್ಯ ಮಳಿಗೆಯವರಿಗೆ ಲಾಭ. ಶುಭಸಂಖ್ಯೆ:1
ವೃಷಭ: ಪತ್ರ ವ್ಯವಹಾರದಿಂದ ಲಾಭ. ವಿದೇಶದಲ್ಲಿ ಉದ್ಯೋಗ ಪ್ರಾಪ್ತಿಯಾಗಿ ಸಮಾಧಾನ. ಆರೋಗ್ಯದಲ್ಲಿ ಸುಧಾರಣೆಯಾಗಿ ನೆಮ್ಮದಿ. ಶುಭಸಂಖ್ಯೆ:9
ಮಿಥುನ: ಧಾರ್ವಿುಕ ಸಂಸ್ಥೆಗಳ ಕೆಲಸಗಾರರಿಗೆ ಅಧಿಕ ಆದಾಯ ಬರಲಿದೆ. ಹೋಟೆಲ್ ವ್ಯವಹಾರದಲ್ಲಿ ಲಾಭ. ಕನಸಿನ ನಿವೇಶನ ಸಿಗಲಿದೆ. ಶುಭಸಂಖ್ಯೆ: 4
ಕಟಕ: ಆಸ್ತಿ ವಿವಾದ ಬಗೆಹರಿಯಲಿದೆ. ಮಾನಸಿಕ ನೆಮ್ಮದಿ ಇರಲಿದೆ. ವೈದ್ಯಕೀಯ ಶಿಕ್ಷಣದ ಬಹುದಿನಗಳ ಕನಸು ಈಡೇರುವುದು. ಶುಭಸಂಖ್ಯೆ: 7
ಸಿಂಹ: ಉದ್ಯೋಗ ಸ್ಥಳದಲ್ಲಿ ಎಚ್ಚರದಿಂದ ಇರಿ. ಸ್ತ್ರೀಯರಿಗೆ ಉನ್ನತ ಹುದ್ದೆ ಲಭಿಸಲಿದೆ. ಕಾನೂನು ಕ್ಷೇತ್ರದಲ್ಲಿ ಸ್ವಪ್ರಯತ್ನದಿಂದ ಯಶಸ್ಸು. ಶುಭಸಂಖ್ಯೆ:2
ಕನ್ಯಾ: ಔಷಧ ಅಂಗಡಿಯವರಿಗೆ ಲಾಭದ ಪ್ರಮಾಣ ಕುಂಠಿತ. ವಿದೇಶದಿಂದ ಹೆಣ್ಣುಮಕ್ಕಳ ಆಗಮನ. ಮಾತಿನಿಂದ ಸಮಸ್ಯೆ ದೂರ. ಶುಭಸಂಖ್ಯೆ: 4
ತುಲಾ: ಕೃಷಿ ಚಟುವಟಿಕೆಯಿಂದ ಧನಾಗಮನ, ಅನುಕೂಲ. ಬಂಧುಗಳೊಂದಿಗೆ ಪ್ರಯಾಣ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಶುಭಸಂಖ್ಯೆ:5
ವೃಶ್ಚಿಕ: ಬ್ಯಾಂಕ್ ಉದ್ಯೋಗದಲ್ಲಿ ಸಮಾಧಾನ ಸಿಗಲಿದೆ. ಸಾಲಗಾರರ ಕಿರಿಕಿರಿಯಿಂದ ಮುಕ್ತಿ. ಶಿಕ್ಷಣ ಸಂಸ್ಥೆಯ ಉದ್ಯೋಗಗಳಿಗೆ ಬಡ್ತಿ. ಶುಭಸಂಖ್ಯೆ:2
ಧನಸ್ಸು: ತಂದೆಯ ಆರೋಗ್ಯದಲ್ಲಿ ಸುಧಾರಣೆ, ಸಾಲದ ಉದ್ದೇಶ ಫಲ ಕೊಡಲಿದೆ. ಆಸ್ತಿ ವಿವಾದದಿಂದ ಕೋರ್ಟ್ ಮೆಟ್ಟಿಲೇರುವ ಸಂಭವ. ಶುಭಸಂಖ್ಯೆ: 2
ಮಕರ: ಸಾರಿಗೆ ನಿರ್ವಾಹಕರಿಗೆ ಧನಾಗಮನ. ಸ್ತ್ರೀಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಪದವಿ ಪ್ರಾಪ್ತಿಯಲ್ಲಿ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ:9
ಕುಂಭ: ನವ ದಂಪತಿಗಳಿಗೆ ಸಂತೋಷದ ಸುದ್ದಿ. ಮೋಜಿನಿಂದ ತೊಂದರೆ. ಕಿರುಚಿತ್ರ ನಿರ್ದೇಶಕರಿಗೆ ಶುಭ. ಸಿನಿಮಾದವರಿಗೆ ಧನಲಾಭ. ಶುಭಸಂಖ್ಯೆ: 7
ಮೀನ: ಅವಿವಾಹಿತರಿಗೆ ವಿವಾಹ ನಿಶ್ಚಯ. ವಿದ್ಯಾಭ್ಯಾಸದಲ್ಲಿ ಯಶ. ಪ್ರಯಾಣದ ಮೂಲಕ ಧನ ಸಂಪಾದನೆ. ವಿದೇಶಿ ಸ್ನೇಹಿತನ ಭೇಟಿ. ಶುಭಸಂಖ್ಯೆ:6