12ನೇ ವಯಸ್ಸಿನಲ್ಲೇ ನನಗೆ ಕುಷ್ಠರೋಗವಿತ್ತು.. ಆ ಸಮಯದಲ್ಲೇ ನನಗೆ ಇದು ಪರಿಚಯವಾಗಿದ್ದು; ಡಿಂಪಲ್ ಕಪಾಡಿಯಾ

Untitled-design-2024-07-30T193549.706-2
Published on

ಮುಂಬೈ: ಬಾಲಿವುಡ್​​ನ ಬಾಬಿ ಅಂದರೆ ಡಿಂಪಲ್​ ಕಪಾಡಿಯಾ, 80ರ ದಶಕದ ಸುಂದರ ನಾಯಕಿಯರಲ್ಲಿ ಇವರ ಒಬ್ಬರು ಎಂದರೆ ತಪ್ಪಾಗಲಾರದು. ಸಾಕಷ್ಟು ಧೈರ್ಯಶಾಲಿಯಾದ ಡಿಂಪಲ್​ ಕಪಾಡಿಯಾ ಆ ಸಮಯದಲ್ಲೇ ತಮ್ಮ ಮೊದಲ ಚಿತ್ರದಲ್ಲೇ ಬಿಕಿನಿ ತೊಟ್ಟು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದರು. ಅವರ ಮೊದಲ ಸಿನಿಮಾ ಬಾಬಿ ಸೂಪರ್​ ಹಿಟ್​ ಆಗಿ ಬಾಕ್ಸ್​ ಆಫೀಸ್​ ದಾಖಲೆಗಳನ್ನು ಮುರಿದಿತ್ತು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಡಿಂಪಲ್​ ಕಪಾಡಿಯಾ, ನನಗೆ 12ನೇ ವಯಸ್ಸಿನಲ್ಲಿ ಕುಷ್ಠರೋಗವಿತ್ತು ಆದರೆ ಬಳಿಕ ಗುಣವಾಯಿತು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಕುಟುಂಬ ಸ್ನೇಹಿತರೊಬ್ಬರು ತನ್ನ ಶಾಲೆಯಿಂದ ಬಹಿಷ್ಕರಿಸುತ್ತಾರೆ ಎಂದು ಬೆದರಿಸಿದ್ದರು ಎಂದು ಹೇಳಿದ್ದಾರೆ.

ನನ್ನ ತಂದೆ ಚುನ್ನಿಭಾಯ್ ಕಪಾಡಿಯಾ ಚಿತ್ರರಂಗದ ಅನೇಕರಿಗೆ ಪರಿಚಿತರು. ಆ ಕಾಲದ ಖ್ಯಾತ ನಿರ್ದೇಶಕರೊಬ್ಬರು ಕುಟುಂಬದ ಸ್ನೇಹಿತನಂತೆ ಇದ್ದರು. ನಾನು ಕುಷ್ಠರೋಗದಿಂದ ಬಳಲುತ್ತಿದ್ದಾಗ ನನಗೆ ಸುಮಾರು 12 ವರ್ಷ. ನಾನು ಅದನ್ನು ನನ್ನ ಮೊಣಕೈಯಲ್ಲಿ ಹೊಂದಿದ್ದೆ. ಸ್ನೇಹಿತನಂತಿದ್ದ ಆ ನಿರ್ದೇಶಕ, ನೀವು ಶಾಲೆಯಿಂದ ಬಹಿಷ್ಕೃತ ಆಗುವುದನ್ನು ನಾನು ನೋಡುತ್ತೇನೆ ಎಂದು ಹೇಳಿದ್ದರು. ಆ ಪದವನ್ನು ನಾನು ಮೊದಲ ಬಾರಿಗೆ ಕೇಳಿದೆ. ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ಬಳಿಕ ಕುಷ್ಠರೋಗ ಗುಣವಾಯಿತು ಎಂದು ಡಿಂಪಲ್​ ​ನೆನಪಿಸಿಕೊಂಡರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net