

ಲಂಡನ್: ಭಾರತದ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರು ಹಾಗೂ ಪ್ರಪಂಚದಾದ್ಯಂತ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ ದಿಲ್ಜಿತ್ ದೋಸಾಂಜ್(Diljit Dosanjh) ಅವರ ಕನ್ಸರ್ಟ್ ಬಗ್ಗೆ ಹೊಸದಾಗಿ ಪರಿಚಯ ಮಾಡುವ ಅಗತ್ಯತೆ ಇಲ್ಲ. ಇತ್ತೀಚೆಗೆ ಅವರು ಲಂಡನ್ನಲ್ಲಿ ನೀಡಿದ ಸಂಗೀತ ಕಾರ್ಯಕ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ನಟ ಪಾಕಿಸ್ತಾನಿ ಸುಂದರಿಯನ್ನು ವೇದಿಕೆ ಕರೆದು ಆಕೆಯನ್ನು ಪರಿಚಯಿಸಿ ಬಳಿಕ ಆಕೆಗಾಗಿ ಹಾಡೊಂದನ್ನು ಹಾಡಿದ್ದಾನೆ.
ವೈರಲ್ ವಿಡಿಯೋದಲ್ಲಿ ಪಾಕಿಸ್ತಾನದಲ್ಲಿ ಸೂಪರ್‌ಸ್ಟಾರ್ ಎಂದು ಖ್ಯಾತಿ ಇರುವ ನಟಿ ಹನಿಯಾ ಅಮೀರ್ ಅವರು ಲಂಡನ್ನಲ್ಲಿ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿಯನ್ನು ಆನಂದಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ವೇಳೆ ದಿಲ್ಜಿತ್ ನಟಿಯನ್ನು ನೋಡಿ ವೇದಿಕ ಮೇಲೆ ಬರುವಂತೆ ಸನ್ನೆ ಮಾಡುತ್ತಾರೆ. ಅದಕ್ಕೆ ಹನಿಯಾ ಕೈಮುಗಿದು ಬೇಡ ಎಂಬಂತೆ ತಲೆಯನ್ನು ಅಲ್ಲಾಡಿಸಿ ನಿರಾಕರಿಸುತ್ತಾರೆ. ಆದರೆ ಪ್ರೇಕ್ಷಕರ ಗದ್ದಲ ಮತ್ತು ದಿಲ್ಜಿತ್ ಅವರ ಮನವಿಯಿಂದಾಗಿ ನಟಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಗೆ ಹೋಗುತ್ತಾರೆ.
ಹನಿಯಾ ವೇದಿಕೆಗೆ ಬಂದ ತಕ್ಷಣ ದಿಲ್ಜಿತ್ ಅವರು ಸೂಪರ್ ಸ್ಟಾರ್ ಇಲ್ಲಿದ್ದಾರೆ ಎಂದು ಹೇಳುತ್ತಾ ಅವರಿಗಾಗಿ ಒಂದು ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಇದನ್ನು ಇಷ್ಟಪಡುತ್ತಿದ್ದಾರೆ. ವಿಡಿಯೋ ಕೊನೆಯಲ್ಲಿ ಹಲೋ ಲಂಡನ್, ನಮ್ಮೆಲ್ಲರನ್ನು ರಂಜಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹನಿಯಾ ಹೇಳಿದ್ದಾರೆ. ಬಳಿಕ ದಿಲ್ಜಿತ್, ನಾನು ನಿಮ್ಮ ಮತ್ತು ನಿಮ್ಮ ಕೆಲಸದ ಅಭಿಮಾನಿ. ನೀವು ಇಲ್ಲಿ ಬಂದಿದ್ದಕ್ಕೆ ಧನ್ಯವಾದಗಳು ಎಂದು ಪಂಜಾಬಿ ಭಾಷೆಯಲ್ಲಿ ಹೇಳಿದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ದಿಲ್ಜಿತ್ ಪಾಜಿ ಅವರು ತಮ್ಮ ಅಭಿಮಾನಿಗಳ ಕ್ಷಣವನ್ನು ಆನಂದಿಸುತ್ತಿದ್ದಾರೆ, ಅವಳಿಗೆ ಹಾಡಲು ಅವನು ಅವಳ ಪ್ರೇಮಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹನಿಯಾ ಅಮೀರ್ ಒಬ್ಬ ಶ್ರೇಷ್ಠ ಪಾಕಿಸ್ತಾನಿ ನಟಿ, ಅವರನ್ನು ಪಾಕಿಸ್ತಾನದ ಸೂಪರ್‌ಸ್ಟಾರ್ ಎಂದು ಕರೆಯುತ್ತಾರೆ.
ದಿಲ್ಜಿತ್ ಅವರು ಶೀಘ್ರದಲ್ಲೇ ಭಾರತದಲ್ಲಿ ತಮ್ಮ ದಿಲ್ ಲುಮಿನಾಟಿ ಪ್ರವಾಸವನ್ನು ಪ್ರಾರಂಭಿಸುತ್ತಾರೆ. ಅಕ್ಟೋಬರ್ 26 ರಿಂದ ದೆಹಲಿಯಿಂದ ಪ್ರಾರಂಭವಾಗಲಿದೆ. ಇದರ ನಂತರ ಹೈದರಾಬಾದ್, ಅಹಮದಾಬಾದ್, ಲಕ್ನೋ, ಪುಣೆ, ಕೋಲ್ಕತಾ, ಬೆಂಗಳೂರು, ಇಂದೋರ್ ಮತ್ತು ಚಂಡೀಗಢ ನಗರಗಳಲ್ಲಿ ತಮ್ಮ ಸಂಗೀತ ಕಚೇರಿಗಳನ್ನು ನಡೆಸಲಿದ್ದಾರೆ. ಈ ಪ್ರವಾಸವು ಡಿ.29 ರಂದು ಗುವಾಹಟಿಯಲ್ಲಿ ಕೊನೆಗೊಳ್ಳಲಿದೆ. (ಏಜೆನ್ಸೀಸ್)