

ಬೆಂಗಳೂರು: ಶ್ರೀನಿವಾಸನಗರದಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಡಿಜಿಟಲ್ ಆರೆಸ್ಟ್ ಮಾಡಿದ ಸೈಬರ್ ಕಳ್ಳರು ಬೆದರಿಸಿ ಬರೋಬ್ಬರಿ 52.64 ಲಕ್ಷ ರೂ.ದೋಚಿದ್ದಾರೆ.
ಇತ್ತೀಚೆಗೆ ಉದ್ಯಮಿಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ೆಡೆಕ್ಸ್ ಕೋರಿಯರ್ ಕಚೇರಿಯಿಂದ ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲದೆ, ನಿಮ್ಮ ಹೆಸರಿನಲ್ಲಿ ತೈವಾನ್‌ಗೆ 200ಗ್ರಾಂ ಗಾಂಜಾ, 4 ಕೆಜಿ ಬಟ್ಟೆ, 1 ಲ್ಯಾಪ್‌ಟಾಪ್, 35 ಸಾವಿರ ರೂ. ನಗದು ಪಾರ್ಸೆಲ್ ಹೋಗುತ್ತಿದೆ. ಈ ಬಗ್ಗೆ ಮುಂಬೈ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಕರೆಯನ್ನು ಅವರಿಗೆ ವರ್ಗಾವಣೆ ಮಾಡುತ್ತೆನೆ ಎಂದು ಹೆದರಿಸಿದ್ದಾನೆ.
ಸ್ವಲ್ಪ ಹೊತ್ತಿಗೆ ಮತ್ತೊಬ್ಬ ಕರೆ ಮಾಡಿ ಮುಂಬೈ ಪೊಲೀಸ್ ಎಂದು ಪರಿಚಯ ಮಾಡಿಕೊಂಡು ಟೆಲಿಗ್ರಾಂನಲ್ಲಿ ವಿಡಿಯೋ ಕಾಲ್ ಮಾಡಿ ಎಲ್ಲಿಯೂ ಹೋಗದಂತೆ ಮತ್ತು ಯಾರಿಗೂ ಹೇಳದಂತೆ ತಾಕೀತು ಮಾಡಿ ಡಿಜಿಟಲ್ ಆರೆಸ್ಟ್ ಮಾಡಿದ್ದ. ವರ್ಚುವಲ್ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ಆಧಾರ್, ಕುಟುಂಬಸ್ಥರ ಬ್ಯಾಂಕ್ ಖಾತೆ ವಿವರ ಪಡೆದಿದ್ದ. ಮತ್ತೆ ಅಕ್ರಮ ವಹಿವಾಟು ನಡೆದಿದೆ.
ಪ್ರಸ್ತುತ ನಿಮ್ಮಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಆರ್‌ಬಿಐ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವಂತೆ 52.64 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ವಾಪಸ್ ಉದ್ಯಮಿ ಕರೆ ಮಾಡಿದಾಗ ಮೊಬೈಲ್ ಆ್ ಆಗಿರುವುದು ಗೊತ್ತಾಗಿ ಕೊನೆಗೆ ವಂಚನೆಗೆ ಒಳಗಾಗಿರುವುದು ತಿಳಿದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.