ಅಧಿಕಾರಿಗಳ ಎಡವಟ್ಟು; ವಿದ್ಯಾಥಿರ್ಗಳಿಗೆ ಪಾಠ ಕೇಳಲು ತೊಂದರೆ

64664
Published on: 

ಆನೇಕಲ್: ಪಂಚಾಯಿತಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ತರಗತಿಯೊಳಗೆ ಪಾಠ ಕೇಳುತ್ತಿದ್ದ ಮಕ್ಕಳಿಗೆ ತೊಂದರೆಯಾಗಿದೆ. ಆನೇಕಲ್ ತಾಲೂಕಿನ ಮಂಟಪ ಗ್ರಾಮ ಪಂಚಾಯತಿ ವತಿಯಿಂದ ಶಾಲೆಯ ಆವರಣದಲ್ಲಿ ಗ್ರಾಮ ಸಭೆ ಆಯೋಜನೆ ಮಾಡಿದ್ದರು. ತರಗತಿ ನಡೆಯುತ್ತಿದ್ದರೂ ಆವರಣದಲ್ಲಿ ಜೋರಾಗಿ ಮೈಕ್ ಬಳಸಿದ್ದಾರೆ. ಇದರಿಂದ ಮಕ್ಕಳ ಪಾಠ ಕೇಳಲು ಸಾಧ್ಯವಾಗದೆ ಪರದಾಟ ಅನುಭವಿಸಿದ್ದಾರೆ.

ಶಾಲೆಯ ಆವರಣದಲ್ಲಿ ಗ್ರಾಮಸಭೆ ನಡೆಸಲು ಬಿಇಒ ಯಾವುದೇ ಅನುಮತಿ ನೀಡಿಲ್ಲ. ಮುಖ್ಯ ಶಿಕ್ಷಕರಿಗೂ ಸರಿಯಾದ ಮಾಹಿತಿ ನೀಡದೆ ಗ್ರಾಮಸಭೆ ಆಯೋಜನೆ ಮಾಡಿದ್ದಾರೆ. ಪಂಚಾಯತಿ ಪಿಡಿಓ ನಿರ್ಲಕ್ಷದಿಂದ ಗ್ರಾಮಸಭೆ ನಡೆದಿದೆ. ಗ್ರಾಮ ಸಭೆಯಲ್ಲಿದ್ದ ಜನಪ್ರತಿನಿಧಿಗಳ ನಿರ್ಲಕ್ಷವೂ ಕಾರಣವಾಗಿದೆ.