ಮಾವನ ಕೊಲೆಗೆ ಸೊಸೆಯ ಪಾರ್ಟಿ ಸಂಚು? ಫೋನ್‌ನಲ್ಲೇ ಆರೋಪಿಗಳಿಗೆ ಗೈಡ್! Kanpur Murder

ಕಾನ್ಪುರದಲ್ಲಿ ಉದ್ಯಮಿಯನ್ನು 26 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈ ಕೊಲೆ ಸಂಚಿನ ಹಿಂದೆ ಸೊಸೆಯೇ ಇದ್ದಳು ಎಂದು ಆರೋಪಿಸಿದ್ದು, ಆರೋಪಿಗಳಿಗೆ ಮಾರ್ಗದರ್ಶನ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
The Father-in-law and Daughter-in-law's Plot
ಉತ್ತರ ಪ್ರದೇಶದಲ್ಲಿ ಮಾವನ ಸೊಸೆಯ ಸಂಚು ಆರೋಪ
Published on: 

Uttar Pradesh Murder: ಕಾನ್ಪುರದಲ್ಲಿ ಉದ್ಯಮಿಯೊಬ್ಬರನ್ನು 26 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಸಂಚಿನ ಹಿಂದೆ ಅವರ ಸೊಸೆಯ ಕೈವಾಡ ಇತ್ತು ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ಶಾಕ್ ನೀಡಿದೆ. ಸೊಸೆ ಕೊಲೆ ಆರೋಪಿಗಳಿಗೆ ಮಾರ್ಗದರ್ಶನ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪಾರ್ಟಿಯಲ್ಲಿ ಸೊಸೆ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡುತ್ತಿದ್ದರೆ, ಮನೆಯಲ್ಲಿ ಮಾವನ ಹತ್ಯೆ ನಡೆದಿತ್ತು. ಕಾನ್ಪುರದ ಉದ್ಯಮಿ ವಿನೀತ್ ಮಿನೋಚಾ (63) ಅವರನ್ನು ಮನೆಯಲ್ಲೇ 26 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಪ್ರಕರಣದ ತನಿಖೆಯಲ್ಲಿ ಸೊಸೆ ಶಾಲು ಮಿನೋಚಾ ಹೆಸರು ಕೇಳಿಬಂದಿದೆ.

ಮನೆ ಕೆಲಸದವರಿಂದ ಕೃತ್ಯ?

ಪೊಲೀಸರ ಪ್ರಕಾರ, ಹತ್ಯೆ ನಡೆದ ರಾತ್ರಿ ಶಾಲು ಪತಿ ಹಾಗೂ ಮಗುವಿನ ಜತೆ ಪಾರ್ಟಿಗೆ ಹೋಗಿದ್ದಳು. ಇದೇ ವೇಳೆ ಆಕೆಯ ಮಾಜಿ ಮನೆ ಕೆಲಸಗಾರ ವಿಶಾಲ್ ಮತ್ತು ಆತನ ಸಹಚರ ರಾಜ್ ಕಿಶೋರ್ ಮನೆಗೆ ಬಂದು ವಿನೀತ್ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹತ್ಯೆ ನಡೆಯುತ್ತಿದ್ದ ಸಮಯದಲ್ಲೂ ಶಾಲು ಫೋನ್ ಮೂಲಕ ಆರೋಪಿಗಳ ಸಂಪರ್ಕದಲ್ಲಿದ್ದು, ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

6 ಲಕ್ಷ ರೂ.ಗೆ ಕೊಲೆ ಪ್ಲಾನ್?

ತನಿಖೆ ವೇಳೆ ವಿಶಾಲ್ ನೀಡಿದ ಹೇಳಿಕೆಯ ಆಧಾರದಲ್ಲಿ, ಶಾಲು 6 ಲಕ್ಷ ರೂಪಾಯಿಗೆ ಕೊಲೆ ಮಾಡಿಸಲು ಒಪ್ಪಂದ ಮಾಡಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕಾಗಿ ಮುಂಗಡವಾಗಿ 2 ಲಕ್ಷ ರೂಪಾಯಿ ನೀಡಿದ್ದಳು ಎನ್ನಲಾಗಿದೆ. ಮನೆಯ ಡುಪ್ಲಿಕೇಟ್ ಕೀಯನ್ನೂ ಆಕೆ ಆರೋಪಿಗಳಿಗೆ ನೀಡಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪಾರ್ಟಿ ಕೂಡ ಕೊಲೆ ಸಂಚಿನ ಭಾಗ?

ಹತ್ಯೆ ನಡೆದಾಗ ಶಾಲು ಪಾರ್ಟಿಯಲ್ಲಿದ್ದಳು. ತಾನು ಘಟನೆಯ ಬಗ್ಗೆ ಏನೂ ತಿಳಿದಿರಲಿಲ್ಲ ಎಂಬಂತೆ ತೋರಿಸಲು ಪಾರ್ಟಿಗೆ ಹೋಗಿದ್ದಳೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪಾರ್ಟಿಯ ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆ ವಿವರಗಳು ಹಾಗೂ ಶಾಲು ಮತ್ತು ಆರೋಪಿಗಳ ನಡುವಿನ ಸಂಭಾಷಣೆಗಳನ್ನು ಪರಿಶೀಲಿಸಲಾಗುತ್ತಿದೆ

ಇದನ್ನೂ ಓದಿ: ಕರ್ನಾಟಕದ ರಸ್ತೆಗಳಲ್ಲಿ ದಿನಕ್ಕೆ 31 ಮಂದಿ ಬಲಿ; 25-35ರ ಯುವಕರೇ ಜವರಾಯನ ಟಾರ್ಗೆಟ್! | Karnataka Road Accidents

ಶಾಲು ಹಾಗೂ ಆಕೆಯ ಪತಿ ರಾತ್ರಿ ಸುಮಾರು 3 ಗಂಟೆಗೆ ಪಾರ್ಟಿಯಿಂದ ಮನೆಗೆ ಮರಳಿದಾಗ, ವಿನೀತ್ ಮಲಗುವ ರೂಮ್​ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ್ ಮತ್ತು ರಾಜ್ ಕಿಶೋರ್​ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net