ಸಿದ್ದರಾಮಯ್ಯಗೆ ಷಾ ಫೋನ್ ಮಾಡಿದ್ರಾ?

B C PATIL
Published on

ಹಾವೇರಿ: ಸಿದ್ದರಾಮಯ್ಯ ಅವರ ಹೇಳಿಕೆಗೆ ಬೆಲೆ ಇದೆ ಏನ್ರಿ? ಅವರಿಗೆ ಅಮಿತ್ ಷಾ ಫೋನ್ ಮಾಡಿದ್ರಾ? ಅವರದ್ದೇನು ಬಿಜೆಪಿ ಪಕ್ಷನಾ…? ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸುತ್ತಾರೆ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ವಿಷಯಗಳನ್ನೆಲ್ಲ ನಮ್ಮ ಪಕ್ಷದ ವರಿಷ್ಠರು ಹೇಳಬೇಕು. ಅದು ಬಿಟ್ಟು ಸಿದ್ದರಾಮಯ್ಯ ಹೇಳಿದ್ದಾರೆ ಅಂದ್ರೆ ಅದಕ್ಕೆ ಬೆಲೆಯಿಲ್ಲ. ಅಲ್ಲದೆ, ಈ ವಿಷಯ ಊಹಾಪೋಹ ಅಷ್ಟೇ ಎಂದರು.

ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ. ಬಂದ ಭಾಗ್ಯವನ್ನು ಕಾಲಿಂದ ಒದ್ದಿದ್ದಾರೆ. 37ಜನರಿದ್ದ ಅವರಿಗೆ ಸಿಎಂ ಸ್ಥಾನ ಕೊಟ್ರೆ ಸರಿಯಾಗಿ ನಿಭಾಯಿಸೋಕೆ ಆಗಲಿಲ್ಲ ಎಂದು ಟೀಕಿಸಿದರು. 2023ರಲ್ಲಿ ಬಿಜೆಪಿ 150 ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತದೆ ಎಂದರು. ಕೃಷಿ ಕಾಯ್ದೆ ವಿರೋಧಿಸುವುದು ಕೃಷಿಕರನ್ನು ವಿರೋಧಿಸಿದಂತೆ ಅರ್ಥ. ಕೃಷಿ ಕಾಯ್ದೆ ರೈತರ ಪರವಾಗಿವೆ. ಇದನ್ನು ವಿರೋಧಿಸಿ ಚಳವಳಿ ಮಾಡುವ ಕಾಂಗ್ರೆಸ್ ಪಕ್ಷ ರೈತರ ವಿರೋಧಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net