ರಣ್​​ಬೀರ್​​-ಆಲಿಯಾ ಮಗಳು, ಫ್ಯಾನ್​​ ನೀಡಿದ ಹೇರ್​​​ ಕ್ಲಿಪ್​​​​ ಹಾಕಿಕೊಂಡಿದ್ರಾ? 'ರಾಹಾ'ಗೆ ಕ್ಲಿಪ್​​ ಗಿಫ್ಟ್​​​ ಕೊಟ್ಟ ಅಭಿಮಾನಿಯ ಟ್ವೀಟ್​​ ವೈರಲ್​..!

ರಮಿಷ
Published on

ಬಾಲಿವುಡ್​​​​​​ನ ಕ್ಯೂಟ್​​​​ ಕಪಲ್​​​ ರಣ್​​​ಬೀರ್​-ಆಲಿಯಾ ನಿನ್ನೆ ತಮ್ಮ ಮುದ್ದಾದ ಮಗಳು ರಾಹಾ ಜತೆಗೆ ನಿನ್ನೆ ಕ್ಯಾಮೆರಾಗೆ ಪೋಸ್ ಕೊಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ರಾಹಾ ಈ ವಿಡಿಯೋದಲ್ಲಿ ಪಿಂಕ್​​ ಮತ್ತು ವೈಟ್​​ ಫ್ರಾಕ್​ ಧರಿಸಿದ್ದು, ತಲೆಗೆ ಪಿಂಕ್​​​ ಬಣ್ಣದ ಕ್ಲಿಪ್ಪನ್ನೂ ಹಾಕಲಾಗಿದೆ.


ನವೆಂಬರ್ 6, 2022 ರಂದು ರಾಹಾ ಜನಿಸಿದ್ದು, ಅಂದಿನಿಂದ ನಿನ್ನೆಯವರೆಗೂ ರಾಹಾಳನ್ನ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಕೊನೆಗೂ ರಾಹಾಳ ಜತೆ ರಣ್​​ಬೀರ್​ ಮತ್ತು ಆಲಿಯಾ ಕ್ಯಾಮೆರಾಗೆ ಪೋಸ್​​​ ಕೊಟ್ಟಿದ್ದಾರೆ. ವರ್ಷಾಂತ್ಯದಲ್ಲಿ ಕಪೂರ್​​ ಕುಟುಂಬದ ​​​ಕ್ರಿಸ್​​​ಮಸ್​​ ಲಂಚ್​​ ಗೆಟ್​​​ ಟುಗೆದರ್​​​​ನಲ್ಲಿ ಮಗಳ ಜತೆ ಪೋಷಕರು ಮೀಡಿಯಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.


ಸದ್ಯ ಫ್ಯಾನ್ಸ್ ನಡುವೆ​​ ರಾಹಾ ಅಮ್ಮನನ್ನು ಹೋಲುತ್ತಾಳೆಯೋ ಅಥವಾ ಅಪ್ಪ ರಣ್​​ಬೀರ್​​ನನ್ನ ಹೋಲುತ್ತಾಳೆಯೋ ಎಂಬ ಚರ್ಚೆ ಶುರುವಾಗಿದೆ. ಇದರ ನಡುವೆ ವೈರಲ್​​ ಆದ ರಾಹಾ ಫೋಟೋನಲ್ಲಿ ಆಕೆ ಧರಿಸಿರುವ ಗುಲಾಬಿ ಕೂದಲಿನ ಕ್ಲಿಪ್‌ಗಳನ್ನು ಉಡುಗೊರೆಯಾಗಿ ನೀಡಿದ ಅಭಿಮಾನಿಯೊಬ್ಬರು ತಾವೇ ಈ ಗಿಫ್ಟ್​​ ಕೊಟ್ಟಿದ್ದು ಎಂದು ಟ್ವೀಟ್​​ ಮಾಡಿ ಖುಷಿ ಪಟ್ಟಿದ್ದಾರೆ.


ಇನ್ನು ಈ ಬಗ್ಗೆ ಟ್ವೀಟ್​​ ಮಾಡಿದ ಅಭಿಮಾನಿ ರಾಹಾ ಹಾಕಿಕೊಂಡ ಗುಲಾಬಿ ಬಣ್ಣದ ಕ್ಲಿಪ್​​​ಗಳನ್ನ ನಾನು ರಣ್​​ಬೀರ್​ಗೆ ಪ್ರಮೋಷನ್​​ ಈವೆಂಟ್​​ ಒಂದರಲ್ಲಿ ಕೊಟ್ಟಿದ್ದೆ. ವೈರಲ್​ ಆಗಿರುವ ಟ್ವೀಟ್​​ನಲ್ಲಿ ಒಂದೆಡೆ ಉಡುಗೊರೆಯಾಗಿ ನೀಡಿದ ಕ್ಲಿಪ್ನ ಫೋಟೋ ಮತ್ತು ರಾಹಾ ಆ ಕ್ಲಿಪ್​ ಧರಿಸಿರುವ ಫೋಟೋವನ್ನ ಹಂಚಿಕೊಳ್ಳಲಾಗಿದೆ. ಇನ್ನು ಈ ಪೋಟೋಗೆ "ವಾವ್… ಬೇಬಿ ರಾಹಾ ನನ್ನ ಗಿಫ್ಟ್ ಹೇರ್ ಕ್ಲಿಪ್‌ಗಳನ್ನು ಧರಿಸಿದ್ದಾಳೆ'' ಅದೂ ಮೊದಲ ಬಾರಿ ಮೀಡಿಯಾ ಮುಂದೆ ಕಾಣಿಸಿಕೊಂಡಾಗಲೇ ಎಂದು ಖುಷಿ ಪಟ್ಟಿದ್ದಾರೆ.

ಪಿಂಕ್​ ಮತ್ತು ವೈಟ್​ ಫ್ರಾಕ್​ ಧರಿಸಿರುವ ರಾಹಾಗೆ ವೈಟ್​​ ರಬ್ಬರ್​​ ಬ್ಯಾಂಡ್​​​ನಿಂದ ಜುಟ್ಟು ಕಟ್ಟಿದ್ದಾರೆ. ಮಗಳು ”ರಾಹಾ” ಪಕ್ಕದಲ್ಲಿ ನಿಂತ ಆಲಿಯಾ ಮುಳದಲ್ಲಿ ಮಂದಹಾಸ ಮೂಡಿದೆ. ಸದ್ಯ ರಾಹಾ ಳನ್ನ ಮೊದಲ ಬಾರಿ ಕಂಡ ನೆಟ್ಟಿಗರು ಕ್ಯೂಟ್​​ ಬೇಬಿ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.ಬಾಲಿವುಡ್​ನಲ್ಲಿ ಆಲಿಯಾ ಭಟ್​ ಅವರು ಸಖತ್​ ಬೇಡಿಕೆ ಹೊಂದಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net